SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 19, 2024
ಶಿವಮೊಗ್ಗ| ನಗರದ ಖಾಸಗಿ ಬಸ್ಸ್ಟಾಂಡ್ ನಲ್ಲಿ ಪ್ರಜ್ಙೆ ಇಲ್ಲದೆ ಮಲಗಿದ್ದ, 40 ವರ್ಷದ ಅನಾಮದೇಯ ವ್ಯಕ್ತಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಡಿಸೆಂಬರ್ 16 ರಂದು ಖಾಸಗಿ ಬಸ್ ನಿಲ್ದಾಣದಲ್ಲಿ ಅನಾಮದೇಯ ವ್ಯಕ್ತಿ ಅರೆಪ್ರಜ್ಙೆ ಸ್ಥಿತಿಯಲ್ಲಿ ಮಲಗಿದ್ದ. ಆತನನ್ನು ಸಾರ್ವಜನಿಕರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು ಆವೇಳೆ ವೈದ್ಯರು ಪರೀಕ್ಷಿಸಿದಾಗ ಆತ ಮೃತಪಟ್ಟಿರುವುದು ತಿಳಿದುಬಂದಿದೆ.

ಮೃತ ವ್ಯಕ್ತಿಯು 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ದೃಡವಾದ ಮೈಕಟ್ಟು, ಒಂದು ಇಂಚು ಉದ್ದದ ಕಪ್ಪು ಬಳಿ ಕೂದಲು ಹೊಂದಿದ್ದು, ವ್ಯಕ್ತಿಯ ಬಲ ಎದೆಯ ಮೇಲೆ ನಾಗಮ್ಮ, ಬಲಗೈ ಒಳಭಾಗದಲ್ಲಿ ಆಕಾಶ, ಅಮೃತ, ಜಗ್ಗು ಹಾಗೂ ಓಂ ಚಿತ್ರದ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಈ ಮೃತ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ ದೊಡ್ಡಪೇಟೆ ಪೋಲಿಸ್ ಠಾಣೆ ದೂ,ಸಂ 08182 261414 ಅಥವಾ ಮೊ. ನಂ 9916882544 ಗೆ ಸಂಪರ್ಕಿಸುವಂತೆ ದೊಡ್ಡಪೇಟೆ ಪೋಲಿಸ್ ಠಾಣೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SUMMARY | A 40-year-old unidentified man, who was sleeping unconsciously at a private bus stand in the city, died at The Meggan Hospital.
KEYWORDS | Meggan Hospital, private bus stand, shivamogga,