SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 18, 2025
ಸಾಗರ | ಅಡಿಕೆ ಮರಗಳಿಗೆ ಹಾನಿ ಉಂಟಾಗಿ ನಷ್ಟ ಅನುಭವಿಸಿರುವ ರೈತರಿಗೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ 67 ಕೋಟಿ ಹಣವನ್ನು ಬಿಡುಗಡೆಗೊಳಿಸುತ್ತಿದ್ದೇವೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಸಾಗರದ ಸಂತೆ ಮೈದಾನದಲ್ಲಿ ಅಡಿಕೆ ಬೆಳೆಗಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶಕ್ಕೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆಗಮಿಸಿದರು.
ಈ ವೇಳೆ ಮಾತನಾಡಿದ ಅವರು ನಾವು ಪ್ರತಿ ಮನೆಯಲ್ಲೂ ಅಡಿಕೆಯನ್ನು ಬಳಸುತ್ತೇವೆ. ಪೂಜೆ ಸಂದರ್ಭದಲ್ಲಿ ಅಡಿಕೆ ಗಣೇಶ ದೇವರಾಗಿ ಬದಲಾಗುತ್ತೆ. ಎಲ್ಲಾ ಕ್ಷೇತ್ರದಲ್ಲೂ ಅಡಿಕೆಯ ಉಪಯೋಗ ಇದೆ. ನಾನು ಈಗಾಗಲೇ ಕೃಷಿ ಮಂತ್ರಿಯನ್ನು ಭೇಟಿಯಾಗಿ ಬಂದೆ. ಯಾವ ಸರ್ಕಾರ ಇಲ್ಲಿ ಅಧಿಕಾರದಲ್ಲಿದೆ ಎಂಬುವುದು ನಮಗೆ ಮುಖ್ಯ ಅಲ್ಲ ರೈತರ ಸಮಸ್ಯೆ ಬಗೆಹರಿಸಬೇಕೆಂಬುವುದು ಮುಖ್ಯ ಯಾರು ಚಿಂತೆ ಮಾಡಬೇಡಿ ನಿಮ್ಮೊಂದಿಗೆ ನಾವು ಇದ್ದೇವೆ ಎಂದರು.
ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಹಣ ಸಿಗುವುದಿಲ್ಲ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ತಾವು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗಬೇಕು. ಅಡಿಕೆ ಬೆಳೆಗೆ ವೈಜ್ಞಾನಿಕ ಬೆಲೆ ಹೆಚ್ಚಿಸಲು ನಾವು ತಯಾರಿದ್ದೇವೆ ಹಾಗೆಯೇ ಅಕ್ರಮ ಅಡಿಕೆ ಆಮದನನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಳೆದ ವರ್ಷ ಅಡಿಕೆ ಬೆಳೆಗೆ ಸಾಕಷ್ಟು ಹಾನಿ ಉಂಟಾಗಿದೆ. ಈ ಹಿನ್ನಲೆ ಅಡಿಕೆಗೆ ಭಾದಿಸುವ ರೋಗಗಳ ಬಗ್ಗೆ ಸಂಶೋಧನೆ ನಡೆಸಲು ತಂಡ ರಚಿಸುತ್ತೇವೆ.ಅಡಿಕೆ ಮರಗಳಿಗೆ ಹಾನಿ ಉಂಟಾಗಿ ನಷ್ಟ ಅನುಭವಿಸಿರುವ ರೈತರಿಗೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ 67 ಕೋಟಿ ಹಣವನ್ನು ಬಿಡುಗಡೆಗೊಳಿಸುತ್ತಿದ್ದೇವೆ ಎಂದರು.
16 ಸಂಸ್ಥೆಗಳಿಗೆ ಅಡಿಕೆ ಬಗ್ಗೆ ಸಂಶೋಧನೆ ನಡೆಸಿ ವರದಿ ನೀಡಲು ಹೇಳಿದ್ದೇವೆ
ಅಡಿಕೆ ತಿನ್ನುವುದರಿಂದ ಕಾನ್ಸರ್ ಬರುತ್ತೆ ಎಂಬ ವದಂತಿಗಳು ಇತ್ತೀಚೆಗೆ ಹರಡಿದೆ. ಆದರೆ ಅಡಿಕೆಯನ್ನು ಹಿಂದಿನಿಂದಲೂ ಅನೇಕ ಜನ ಬಳಸುತ್ತಿದ್ದಾರೆ. ಅಡಿಕೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಅಡಿಕೆಯ ಬಗ್ಗೆ ಹಬ್ಬಿರುವ ವದಂತಿಯನ್ನು ದೂರಗೊಳಿಸಲು 16 ಸಂಸ್ಥೆಗಳಿಗೆ ಸಂಶೋಧನೆ ನಡೆಸಿ ವರದಿ ನಡೆಸಲು ಹೇಳಿದ್ದೇವೆ ಎಂದರು.
SUMMARY | Union Agriculture Minister Shivraj Singh Chouhan said that rs 67 crore will be released in this year’s Union Budget.
KEYWORDS | Shivraj Singh Chouhan, Agriculture Minister, Union Budget, formers,