SHIVAMOGGA | MALENADUTODAY NEWS | ಮಲೆನಾಡು ಟುಡೆ Dec 17, 2024
ಶಿವಮೊಗ್ಗ ಪೊಲೀಸ್ ಇಲಾಖೆ ನಿನ್ನೆದಿನ ಶಿವಮೊಗ್ಗದಲ್ಲಿ 2024 ರ ಅವಧಿಯಲ್ಲಿ ನಡೆದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಪ್ರಾಪರ್ಟಿ ಪರೆಡ್ ನಡೆಸಿದೆ. ಈ ವೇಳೆ ಭದ್ರಾವತಿ ಶಾಸಕ ಬಿಕೆ ಸಂಗಮೇಶ್‌ರವರ ಸಹೋದರನ ಕಾರು ಕಳ್ಳತನದ ಪ್ರಕರಣವನ್ನ ಭೇದಿಸಿದ ವಿಚಾರ ಬೆಳಕಿಗೆ ಬಂಧಿದೆ.
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರವರ ಸಹೋದರ ಶಿವಕುಮಾರ್ ಎಂಬವರು ಖರೀದಿಸಿದ್ದ ಎರ್ಟಿಗಾ ಕಾರನ್ನು, ಶಿವಮೊಗ್ಗದ ಸೆಕೆಂಡ್ ಹ್ಯಾಂಡ್ ವಾಹನಗಳ ಶೋರೂಂನಿಂದ ಕಳವು ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೋಟೆ ಠಾಣೆ ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ಮತ್ತವರ ತಂಡ ಪ್ರಕರಣ ತನಿಖೆ ಕೈಗೊಂಡಿತ್ತು. ಸಿಸಿ ಕ್ಯಾಮರಾದಲ್ಲಿ ವಾಹನದ ಚಲನವಲನ ಆಧರಿಸಿ, ಪ್ರಕರಣ ಭೇದಿಸಿದ್ದ ತಂಡ, ಅಂತಿಮವಾಗಿ ಕಾರನ್ನ ವಶಕ್ಕೆ ಪಡೆದು ಅದರ ವಾರಸ್ಸುದಾರರಿಗೆ ಹಿಂತಿರುಗಿಸಿದೆ. ಜಿಲ್ಲೆಯಲ್ಲಿ ನಡೆದ ಪ್ರಮುಖ ಪ್ರಕರಣಗಳಲ್ಲಿ ಒಂದಾದ ಈ ಕೇಸ್ ಭೇದಿಸಿದ್ದನ್ನ ಎಸ್‌ಪಿ ಮಿಥುನ್ ಕುಮಾರ್ ಶ್ಲಾಘಿಸಿದ್ದಾರೆ.
SUMMARY | The police at Kote Police Station in Shivamogga have cracked the car theft case of Bhadravati MLA BK Sangamesh’s brother.
KEY WORDS | Kote Police Station in Shivamogga, theft case of Bhadravati MLA BK Sangameshs brother car