ಪ್ರಭಾಸ್‌ ಚಿತ್ರಕ್ಕೆ ರಿಷಬ್‌ ಕಥೆ ಏನಿದು ಗಾಸಿಫ್‌ 

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 10, 2024

ತೆಲುಗಿನ ಸ್ಟಾರ್‌ ನಟ  ಪ್ರಭಾಸ್‌ಗೆ ಕನ್ನಡದ ಪ್ರಸಿದ್ದ ನಟ ಹಾಗೂ ನಿರ್ದೇಶಕ  ರಿಷಬ್‌ ಶೆಟ್ಟಿ ಸಿನಿಮಾ ಮಾಡಲು ಕಥೆ ರೆಡಿಮಾಡಲಿದ್ದಾರೆ ಎಂಬ ಮಾತುಗಳು ಈಗ ಸಿನಿವಲಯದಲ್ಲಿ ಎಲ್ಲೆಡೆ ಕೇಳಿ ಬರುತ್ತಿದೆ.

ಪ್ರಭಾಸ್‌ ಹೊಂಬಾಳೆ ಸಂಸ್ಥೆಯೊಂದಿಗೆ ಒಟ್ಟು 3 ಸಿನಿಮಾ ಮಾಡಲು ಒಪ್ಪಂದಕ್ಕೆ ಸಹಿ ಮಾಡಿದ್ದರು, ಇದರ ನಡುವೆ ಹೊಂಬಾಳೆ ನಿರ್ಮಾಣದ ಸಲಾರ್‌ ಪಾರ್ಟ್‌ ಒನ್‌  ರಿಲೀಸ್‌  ಆಗಿದ್ದು, ಪಾರ್ಟ್‌ 2 ಶೂಟಿಂಗ್‌ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರಭಾಸ್‌ ಜೊತೆಗಿನ ಹೊಂಬಾಳೆ ಫಿಲ್ಮ್‌ನ ಕೊನೆಯ ಪ್ರಾಜೆಕ್ಟ್‌ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿತ್ತು. ಇದೀಗ  ಈ ಕುತೂಹಲಕ್ಕೆ ಪೂರಕ ಎಂಬಂತೆ ಗಾಸಿಫ್‌ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಪ್ರಭಾಸ್‌ ಸಿನಿಮಾಗೆ ರಿಷಬ್‌ ಶೆಟ್ಟಿ ಕಥೆ ಬರೆಯಲಿದ್ದಾರಂತೆ. ಪ್ರಭಾಸ್‌ ಚಿತ್ರಕ್ಕೆ ಕಥೆ ಹೇಳಲು ಹೊಂಬಾಳೆ ಫಿಲ್ಮ್‌ ರಿಷಬ್‌ ಶೆಟ್ಟಿಯನ್ನು ಕೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ರಿಷಬ್‌ ಶೆಟ್ಟಿ ಆಗಲಿ ಹೊಂಬಾಳೆ ಫಿಲ್ಮ್‌ ಆಗಲಿ ಎಲ್ಲಿಯೂ ಅಧಿಕೃತ ವಾಗಿ ಘೋಷಿಸಿಲ್ಲ. ಈ ಗಾಸಿಫ್‌ ಏನಾದರೂ ನಿಜವಾದರೆ 2026 ರಂದು ಚಿತ್ರದ ಶೂಟಿಂಗ್‌ ಆರಂಭವಾಗುವ ಸಾಧ್ಯತೆ ಇದೆ. 

 

SUMMARY | It is being said that kannada actor and director Rishab Shetty is all set to make a film for Prabhas. 


KEYWORDS| Prabhas, Rishab Shetty, kannada, filmy news,

Share This Article