SHIVAMOGGA | MALENADUTODAY NEWS | ಮಲೆನಾಡು ಟುಡೆ Dec 23, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ತುಮರಿ ಭಾಗದಲ್ಲಿ ಚಿರತೆ ಹಾವಳಿ ವಿಪರೀತವಾಗಿ ಎಂಬ ವರದಿ ಬಂದಿದೆ. ಶರಾವತಿ ಕಣಿವೆ ಪ್ರದೇಶದಲ್ಲಿ ಚಿರತೆಗಳು ಜಾನುವಾರು ಮೇಲೆ ದಾಳಿ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿನ ಬಿಳಿಗಾರುನಲ್ಲಿ ದನಗಳ ಮೇಲೆ ಚಿರತೆ ದಾಳಿ ಮಾಡಿದೆ. ಪರಿಣಾಮ ದನವೊಂದು ಗಾಯಗೊಂಡಿದೆ. 15 ದಿನಗಳ ಹಿಂದೇ ಇದೇ ಗ್ರಾಮದಲ್ಲಿ ಚಿರತೆ ದಾಳಿಯಿಂದ ದನವೊಂದು ಸಾವನ್ನಪ್ಪಿದೆ ಎನ್ನಲಾಗಿದೆ. ಅಲ್ಲದೆ ಈ ವರ್ಷ 10 ಕ್ಕೂ ಹೆಚ್ಚು ಜಾನುವಾರುವನ್ನ ಚಿರತೆ ಹಿಡಿದಿದೆ ಎನ್ನಲಾಗಿದೆ. ಹೀಗಾಗಿ ಚಿರತೆಯನ್ನು ಹಿಡಿಯುವ ಅಥವಾ ದೂರ ಅಟ್ಟುವ ಕೆಲಸವಾಗಬೇಕಿದೆ ಎಂದು ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
SUMMARY | Leopard attack in Biligaru village near Tumari, Sagar taluk, Shimoga district
KEY WORDS | Leopard attack ,Biligaru village near Tumari, Sagar taluk, Shimoga district