SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 17, 2024
ಶಿವಮೊಗ್ಗ| ಶಬರಿಮಲೈ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ವತಿಯಿಂದ ಶಬರಿಮಲೈ ಸನ್ನಿದಾನಕ್ಕೆ ಬರುವ ಸ್ವಾಮಿಮಾರ್ ಗಳಿಗೆ ಅನ್ನದಾನಕ್ಕಾಗಿ ಪ್ರತಿ ಮನೆಯಿಂದ ಒಂದು ಮುಷ್ಠಿ ಅಕ್ಕಿ ಸಂಗ್ರಹವನ್ನು ಇದೇ ಡಿಸೆಂಬರ್ 18 ರಿಂದ 24 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಮಾಜಿ ಮಹಾನಗರ ಪಾಲಿಕೆ ಸದಸ್ಯ ಈ.ವಿಶ್ವಾಸ್ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡಸಿ ಮಾತನಾಡಿದ ಅವರು ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಅಯ್ಯಪ್ಪ ಮಾಲಾಧಾರಿ ಭಕ್ತರುಗಳಿಗೆ ಅನ್ನದಾನ ನಡೆಸಲು ಅನುಕೂಲವಾಗುವಂತೆ ಮತ್ತು ಅದಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮ ಡಿಸೆಂಬರ್ 18 ರಂದು ಬೆಳಿಗ್ಗೆ 9.00 ಗಂಟೆಗೆ ಬೊಮ್ಮನಕಟ್ಟೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಪ್ರಾರಂಭವಾಗುವುದು. ಅಂದು ಶ್ರೀ ಸಾಯಿನಾಥ ಸ್ವಾಮಿಗಳು ಒಂದು ಮುಷ್ಠಿ ಅಕ್ಕಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಈ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ, ಕೆ.ಈ.ಕಾಂತೇಶ್ ಉಪಸ್ಥಿತರಿರಲಿದ್ದಾರೆ ಎಂದರು.
ಕೊನೆಯ ದಿನ ಡಿಸೆಂಬರ್ 24 ರಂದು ಶಿವಮೊಗ್ಗದ ಶುಭಮಂಗಳ ಹಾಲ್‌ನಲ್ಲಿ ಎಲ್ಲಾ ಅಯ್ಯಪ್ಪ ಸ್ವಾಮಿ ಭಕ್ತರನ್ನು ಒಟ್ಟಿಗೆ ಸೇರಿಸಿ ಸಾರ್ವಜನಿಕ ಪಡಿಪೂಜೆ ಹಾಗೂ ಶಕ್ತಿಪೂಜೆ ಕಾರ್ಯಕ್ರಮವನ್ನು ನಡೆಸಲಾಗುವುದು. ಆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಬೇಕು ಎಂದರು.
ಹಾಗೆಯೇ ಈ ಅಭಿಯಾನ ಕಾರ್ಯಕ್ರಮವನ್ನು ನಾವು ಸತತವಾಗಿ ನಾಲ್ಕು ವರ್ಷಗಳಿಂದ ನಡೆಸುತ್ತಾ ಬಂದಿದ್ದೇವೆ, ಕಳೆದ ಬಾರಿ 2 ಲಾರಿಯಷ್ಟು ಅಕ್ಕಿಯನ್ನು ಶಬರಿಮಲೈ ಕಳುಹಿಸಿಕೊಡಲಾಗಿದೆ. ಈ ಬಾರಿಯೂ ಕೂಡಾ ಅದೇ ರೀತಿಯಾಗಿ ಪ್ರತಿ ಮನೆಯಿಂದ ಒಂದು ಮುಷ್ಟಿ ಅಕ್ಕಿ ಸಂಗ್ರಹಿಸಿ ಶಬರಿಮಲೈಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
SUMMARY | The Sabarimala Ayyappa Swamy Seva Samaja has organised a fistful of rice collection from each house from December 18 to 24 to provide food to the swamimars who come to Sabarimala sannidhanam.
KEYWORDS | Ayyappa Swamy, Shabarimala Ayyappa Swamy Seva Samaja, shivamogga