SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 14, 2024
ತೆಲುಗಿನ ಸತ್ಯದೇವ್ ಹಾಗೂ ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಜೀಬ್ರಾ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ಯೂಟ್ಯೂಬ್ ನಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿದೆ.
ಕನ್ನಡ ಹಲವು ನಟರು ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ಎಲ್ಲೆಡೆ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಅದರಂತೆಯೇ ಡಾಲಿ ಧನಂಜಯ್ ಕೂಡಾ ಪುಷ್ಪ ಸಿನಿಮಾದಲ್ಲಿ ವಿಲನ್ ರೋಲ್ ನಲ್ಲಿ ನಟಿಸಿ ತೆಲುಗಿನ ಜನರಿಗೆ ಪರಿಚಿತರಾಗಿದ್ದರು.
ಈಗ ಡಾಲಿ ಧನಂಜಯ್ ತೆಲುಗಿನ ಜೀಬ್ರಾ ಹಿಂದೆ ಬಿದ್ದಿದ್ದಾರೆ. ಇದೊಂದು ಕಾಮಿಡಿ ಆಕ್ಷನ್ ಡ್ರಾಮ ಸಿನಿಮಾವಾಗಿದ್ದು, ನವೆಂಬರ್ 22 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.
ಈ ಚಿತ್ರವನ್ನು ಈಶ್ವರ್ ಕಾರ್ತಿಕ್ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಎಂ ಎಸ್ ರೆಡ್ಡಿ ಹಾಗೂ ಬಾಲ ಸುಂದರಂ ಬಂಡವಾಳ ಹೂಡಲಿದ್ದಾರೆ. ಕನ್ನಡದ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
SUMMARY| The trailer of Telugu film Zebra starring Satyadev and Dali Dhananjay in the lead roles has been released
KEY WORDS | Dali Dhananjay, Zebra, Satyadev, movies, kannad movies,