SHIVAMOGGA | MALENADUTODAY NEWS | ಮಲೆನಾಡು ಟುಡೆ Dec 23, 2024
ಗಾಳಿ ತುಂಬುತ್ತಿದ್ದಾಗ ಟಯರ್ ಸ್ಫೋಟಗೊಂಡು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ದೃಶ್ಯವೊಂದು ಇದೀಗ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಕೋಟೆಶ್ವರದ ಘಟನೆ ಇದಾಗಿದೆ ಎಂದು ಹೇಳಲಾಗುತ್ತಿದೆ.
ದೃಶ್ಯದಲ್ಲಿ ಕಾಣುವಂತೆ ಕಳೆದ 21 ರಂದು ನಡೆದ ಘಟನೆ ಇದಾಗಿದೆ. ದೃಶ್ಯದಲ್ಲಿ ಪಂಚರ್ ಶಾಪ್ ಎದುರು ಸ್ಕೂಲ್ ವ್ಯಾನ್ ನಿಂತಿರುತ್ತದೆ. ಈ ವೇಳೆ ಪಂಚರ್ ಶಾಪ್‌ನ ನೌಕರ ಟಯರ್‌ವೊಂದಕ್ಕೆ ಗಾಳಿ ತುಂಬುತ್ತಿರುತ್ತಾನೆ. ಜೊತೆಯಲ್ಲಿ ಟಯರ್‌ಗೆ ತುಂಬುತ್ತಿರುವ ಗಾಳಿಯನ್ನು ಪರೀಕ್ಷೆ ಮಾಡಿ ಎದ್ದೇಳುತ್ತಾನೆ. ಅದೇ ಹೊತ್ತಿನಲ್ಲಿ ಟಯರ್ ಬ್ಲಾಸ್ಟ್ ಆಗುತ್ತದೆ. ಪರಿಣಾಮ ಯುವಕ ಒಂದು ರೌಂಡ್ ಗಾಳಿಯಲ್ಲಿ ಹಾರಿ ಉಲ್ಟಾ ನೆಲಕ್ಕೆ ಬೀಳುತ್ತಾನೆ. ಇದನ್ನ ನೋಡಿದ ಅಲ್ಲಿದ್ದವರು ಸ್ಥಳಕ್ಕೆ ಓಡಿಬರುತ್ತಾರೆ. ಸ್ಥಳೀಯ ವರದಿಯಂತೆ ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಗಾಯಗೊಂಡ ಯುವಕ ಹೆಸರು ಅಬ್ದುಲ್ ರಶೀದ್. ಇನ್ನೂ ಘಟನೆಯ ತೀವ್ರತೆಯಲ್ಲಿ ಟಯರ್‌ನ ಡ್ರಮ್ ಬಸ್‌ನ ಟಾಪ್ ಮೇಲೆ ಹೋಗಿ ಬಿದ್ದಿದೆ.
A scene of a tire blast at a puncture shop near Koteshwara in #Kundapur taluk pic.twitter.com/BlTdpz2I7p
— malenadutoday.com (@malnadtoday) December 23, 2024
SUMMARY | tire blast at a puncture shop near Koteshwara in Kundapur taluk.
KEY WORDS | tire blast at a puncture shop, Koteshwara in Kundapur taluk.