SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024
ಶಿವಮೊಗ್ಗ | ಮಾಜಿ ಡಿಸಿಎಂ ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಠಾಣಾ ಪೊಲೀಸರು ಸುಮೊಟೊ ಕೇಸ್ ದಾಖಲಾಗಿದೆ. ಸುದ್ದಿಗೋಷ್ಟಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಅಡಿಯಲ್ಲಿ ಜಯನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಹೆಚ್ ಎಂ ಸಿದ್ದೇ ಗೌಡರು ದಾಖಲಿಸಿಕೊಂಡ ದೂರಿನ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಕೇಸ್‌ನಲ್ಲಿ ಏನಿದೆ?
ಕಳೆದ ಬುದವಾರ ನವಂಬರ್ 13 ರಂದು ಕೆಎಸ್ ಈಶ್ವರಪ್ಪ ಪತ್ರಿಕಾ ಗೋಷ್ಠಿ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ವಕ್ಪ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಕಾಂಗ್ರೆಸ್ ಮುಖಂಡರ ಹೇಳಿಕೆ ಹಾಗೂ ಮುಸ್ಲಿಂ ಗುತ್ತಿಗೆ ಮೀಸಲಾತಿ ಬಗ್ಗೆ ಮಾತನಾಡಿದ್ದರು. ಈ ವೇಳೆ ಪ್ರಚೋದನಕಾರಿ ಹೇಳಿಕೆ ಆಡಿದ್ದಾರೆ ಎಂಬುದು ಆರೋಪ. ಹಾಗಾಗಿ (1) (a) 299 BNS ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
FIR ನಲ್ಲಿ ಏನಿದೆ
13/11/2004 ರಂದು ಬೆಳಿಗ್ಗೆ 11-00 ಗಂಟೆಯಿಂದ ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ ಶಿವಮೊಗ್ಗ ಪತ್ರಿಕಾಭವನದಲ್ಲಿ ಕೆ,ಎಸ್ ಈಶ್ವರಪ್ಪ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರ ಭಕ್ತ ಬಳಗದ ಸಂಚಾಲಕರು ಇವರು ಪತ್ರಿಕಾ ಗೋಷ್ಟಿ ನಡೆಸಿದ್ದರು. ಆ ವೇಳೆ ಪತ್ರಿಕಾಗೋಷ್ಟಿ ಸಮಯದಲ್ಲಿ ಅವರು ವಕ್ಸ್ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತಿವೆ ಮುಸಲ್ಮಾನರು ಮಾಡುವ ಅಚಾತುರ್ಯಗಳನ್ನೆಲ್ಲಾ ಗಮನಿಸಿದರೂ ಕೂಡ ಕಾಂಗ್ರೇಸ್ ಸರ್ಕಾರ ಸುಮ್ಮನಿದೆ. ರೈತ ಭೂಮಿ, ದೇವಸ್ಥಾನ ಮಠಗಳು ಇಷ್ಟೇಕೆ ಶಾಲಾ ಕಾಲೇಜುಗಳು ಪುರಾತತ್ವ ಇಲಾಖೆಯ ಪ್ರದೇಶಗಳನ್ನೂ ಕೂಡ ವಕ್ಸ್ ಆಸ್ತಿ ಎಂದು ಬದಲಾಯಿಸಲಾಗಿದೆ,
ವಿಶ್ವೇಶ್ವರಯ್ಯ ನವರು ಹುಟ್ಟಿದ ಗ್ರಾಮವನ್ನೂ ಇವರು ಬಿಟ್ಟಿಲ್ಲ ಮತ್ತೊಂದು ಕಡೆ ಇನ್ನೊಬ್ಬ ಮುಸ್ಲಿಂ ನಾಯಕ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಂಡಿದ್ದಾರೆ. ಅಂಬೇಡ್ಕರ್ ಅವರು ಇಸ್ಲಾಂಧರ್ಮ ಸೇರಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಹೀಗೆ ಅವಮಾನ ಮಾಡಿದ್ದರೂ ಕಾಗ್ರೇಸ್‌ನ ಒಬ್ಬ ನಾಯಕನೂ ಕೂಡ ಏಕೆಂದು ಪ್ರಶ್ನೆ ಮಾಡಲಿಲ್ಲ.
ಇಸ್ಲಾಮೀಕರಣಕ್ಕೆ ಕಾಂಗ್ರೇಸ್ ಸರ್ಕಾರ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ ಇದೀಗ ಮುಖ್ಯ ಮಂತ್ರಿ ಸಿದ್ದಾರಾಮಯ್ಯ ಅವರು ಕೂಡ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಂರಿಗೆ ಶೇಕಡಾ 4 ರಷ್ಟು ಮಿಸಲಾತಿ ಘೋಷಣೆ ಮಾಡಲು ಹೊರಟಿದ್ದಾರೆ. ಇವರೇನು ಹಿಂದೂಸ್ಥಾನವನ್ನು ಪಾಕಿಸ್ಥಾನ ಮಾಡಲು ಹೊರಟಿದ್ದಾರೆ.
ಇದು ಹೀಗೇ ಮುಂದುವರೆದರೆ ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುವ ಕಾಲ ದೂರವಿಲ್ಲ ಎಂದಿದ್ದರು. ಅಷ್ಟೇ ಅಲ್ಲದೆ ಕಾಂಗ್ರೇಸಿಗರನ್ನು ಹುಡುಕಿ ಹೊಡೆದು ಕೊಲ್ಲುವಂತಹ ದಿನಗಳು ಬಂದರೂ ಆಶ್ಚರ್ಯವಿಲ್ಲ.ಎಂದಿದ್ದರು.. ಶ್ರೀ.ಕೆ.ಎಸ್ ಈಶ್ವರಪ್ಪರವರು ಪತ್ರಿಕಾಗೋಷ್ಟಿ ಸಮಯದಲ್ಲಿ ಅನ್ಯ ಕೋಮಿನ ವಿರುದ್ಧ ದ್ವೇಷ ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಸೌಹರ್ದತೆಯನ್ನು ಹೆಚ್ಚಿಸುವ ರೀತಿಯಲ್ಲಿ ಅನ್ನ ಕೋಮಿಗೆ ಹಾಗೂ ಅನ್ನ ಪಕ್ಷಕ್ಕೆ, ಉದ್ರೇಕ ಉಂಟಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿರುತ್ತಾರೆ. ಎಂದು ದೂರಿನಲ್ಲಿ ಊಲ್ಲೇಖಿಸಲಾಗಿದೆ.
ಈಶ್ವರಪ್ಪನವರ ಬಂಧನಕ್ಕೆ ಆಗ್ರಹʼ
ಇನ್ನೊಂದೆಡೆ ಈ ಸಂಬಂಧ ಧರ್ಮ, ಧರ್ಮಗಳ ನಡುವೆ ಸಂಘರ್ಷಕ್ಕೆ ಈಶ್ವರಪ್ಪ ದಾರಿ ಮಾಡಿಕೊಡುತ್ತಿದ್ದಾರೆ. ಅವರನ್ನ ಬಂಧಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಶೋಕ ವೃತ್ತದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಪದೇಪದೇ ಅನ್ಯಧರ್ಮಿಯರನ್ನು ಗುರಿಯಾಗಿಟ್ಟುಕೊಂಡು ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಕೆಎಸ್‌ಇ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಕೇಸ್ ದಾಖಲು ರಾಜಕಾರಣ
ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಮುಖಂಡರುಗಳ ವಿರುದ್ಧ ಸಾಲು ಸಾಲು ಕೇಸ್‌ಗಳು ದಾಖಲಾಗುತ್ತಿದೆ. ಈ ಕೇಸ್‌ಗಳ ಹಿನ್ನೆಲೆ ಮುನ್ನೆಲೆ ಜನರ ಅರಿವಿಗೆ ಬರದೇ ಏನಿಲ್ಲ. ಆದಾಗ್ಯು ರಾಜಕಾರಣದ ಹೊಳಕು ಆಚೆ ಬರಲು ದಾಖಲುತ್ತಿರುವ ಪೂರ್ವಾಗೃಹ ದ್ವೇಷ ಪೀಡಿತ ಪ್ರಕರಣಗಳು ಸಾಕ್ಷ್ಯಗಳಾಗುತ್ತಿದೆ. ಇದೀಗ ಅದೇ ಕಾಯಿಲೆ ಶಿವಮೊಗ್ಗದಲ್ಲಿಯು ವ್ಯಕ್ತವಾದಂತಿದೆ. ಇತ್ತಿಚೆಗೆ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ಧದ ಪ್ರಕರಣವೊಂದನ್ನ ಹೈಕೋರ್ಟ್ ನಿರಾಕರಿಸಿತ್ತು. ಇದೀಗ ಮತ್ತೊಂದು ಪ್ರಕರಣ ಕೆಎಸ್ ಇ ವಿರುದ್ಧ ದಾಖಲಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆಯನ್ನ ಸಹ ನಡೆಸಿದೆ. ಹೀಗಾಗಿ ಜಿಲ್ಲೆಯಲ್ಲಿಯು ಕೇಸು ರಾಜಕಾರಣ ಜೋರಾಯ್ತಾ ಎಂಬ ಕುತೂಹಲ ಮೂಡುತ್ತಿದೆ.
SUMMARY| Jayanagar police in Shivamogga have registered a suo motu case against former Deputy CM Eshwarappa.
KEY WORDS | suo motu case, Jayanagar police Shivamogga, Deputy CM Eshwarappa, EYWORDS | Basanagouda Patil Yatnal, Aravind Limbavali, Ramesh Jarkiholi , meeting at former minister Kumar Bangarappa’s residence