ಒಂದೇ ಚಿತ್ರದಲ್ಲಿ ಭಗವದ್ಗೀತೆ ಶ್ಲೋಕ ಸೃಷ್ಟಿಸಿ ದಾಖಲೆ ಬರೆದ ಶಿವಮೊಗ್ಗದ ಬಾಲಕ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 16, 2024

ಪವಿತ್ರ ಗ್ರಂಥವಾದ ಭಗವಧ್ಗೀತೆಯ 700 ಶ್ಲೋಕವನ್ನು 12 ರ ಬಾಲಕನೊಬ್ಬ ಚಿತ್ರದಲ್ಲಿ ಸಂಕೇತದ ಮೂಲಕ ರಚಿಸಿ  ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಬರೆದಿದ್ದಾನೆ. ವಿಶೇಷ ಅಂದರೆ, ಈತ  ಶಿವಮೊಗ್ಗದ ಹೊಳೆಹೊನ್ನೂರಿನವನು. ಇಲ್ಲಿನ ನಿವಾಸಿ ಪಂಪಾಪತಿ ಮತ್ತು ನಂದಿನಿ ದಂಪತಿಯ ಪುತ್ರ ಪ್ರಸನ್ನ ಕುಮಾರ್‌ ಈ ಸಾಧನೆ ಮಾಡಿದ್ದಾರೆ. 

ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಓದುತ್ತಿರುವ ಪ್ರಸನ್ನ ಭಗವದ್ಗೀತೆಯ 700 ಶ್ಲೋಕವನ್ನು1400 ಗೆರೆಯಲ್ಲಿ ಸಂಕೇತ ಭಾಷೆಯನ್ನ ಬಳಸಿಕೊಂಡು ಚಿತ್ರಿಸಿದ್ದಾನೆ. ಸದ್ಯ ಒಟ್ಟು 84,426 ಚಿತ್ರವನ್ನು ಬಿಡಿಸಿ, ಒಂದು ಸಂಪೂರ್ಣ ಚಿತ್ರಣದ ರೂಪದಲ್ಲಿ ಭಗವಧ್ಗೀತೆಯ ಶ್ಲೋಕವನ್ನು ದಾಖಲಿಸಲಾಗಿದೆ.

ಸಂಸ್ಕೃತ ಶ್ಲೋಕದ ಪದಗಳನ್ನ ಇಂಗ್ಲಿಷ್‌ಗೆ ಬದಲಾಯಿಸಿ ಸ್ವರೂಪ್‌ ಅಧ್ಯಯನ ಕೇಂದ್ರದಲ್ಲಿ ಬಳಸುವ ಸಂಕೇತವನ್ನು ಬಳಸಿಕೊಂಡು ಚಿತ್ರ ಬಿಡಿಸಿರುವುದು ವಿಶೇಷ. ಈತನ ಸಾಧನೆ ಇಂಡಿಯಾ ಬುಕ್ ಅಫ್ ರೆಕಾರ್ಡ್​ನಲ್ಲಿ ದಾಖಲಾಗಿದ್ದು ಐಬಿಆರ್ ಅಚೀವರ್ ದಾಖಲೆ ಲಭಿಸಿದೆ

SUMMARY| 12-year-old boy has created a record in the India Book of Records by composing 700 verses of the Bhagavad Gita, the holy book of Sanatan Dharma, through a picture.

 

KEY WORDS |  Bhagavad Gita, India Book of Records, swaroopa adhyayan kendra, mangaloore, shivamogga,

Share This Article