SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 18, 2025
ಶಿವಮೊಗ್ಗ | ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಐತಿಹಾಸಿಕ ‘ಗಾಂಧಿ ಭಾರತ’ ಸಮಾವೇಶಕ್ಕೆ ಪಕ್ಷದ ಎಲ್ಲಾ ಮುಖಂಡರು ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೋರಿದರು.
ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಖಂಡರ ಪೂರ್ವಭಾವಿ ಸಭೆಯಲ್ಲಿಭಾಗವಹಿಸಿ ಮಾತನಾಡಿದ ಅವರು ಡಿಸೆಂಬರ್ 27ರಂದು ನಡೆಯಬೇಕಾಗಿದ್ದ ಗಾಂಧಿ ಭಾರತ್ ಕಾರ್ಯಕ್ರಮವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ನಿಧನದಿಂದ ರದ್ದಾಗಿತ್ತು. ಈಗ ಆ ಕಾರ್ಯಕ್ರಮವನ್ನು ಇದೇ ಜನವರಇ 21ರಂದು ಬೆಳಗಾವಿಯಲ್ಲಿ ಅದ್ದೂರಿಯಾಗಿ ನಡೆಸಲು ರಾಜ್ಯ ಕಾಂಗ್ರೆಸ್ ತೀರ್ಮಾನಿಸಿದೆ ಎಲ್ಲರು ಆಗಮಿಸಿ ಎಂದರು. ಹಾಗೆಯೇ ಫೆಬ್ರವರಿ ನಾಲ್ಕರಂದು ನಡೆಯಲಿರುವ ಮಾಮ್ ಕೋಸ್ ಚುನಾವಣೆಯನ್ನು ಈ ಬಾರಿ ಪಕ್ಷ ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿಲಾಗಿದೆ. ಇಂದಿನಿಂದಲೇ ಎಲ್ಲಾ ಮುಖಂಡರು ಕಾರ್ಯಕರ್ತರು ಸರಿಯಾದ ಮಾರ್ಗಸೂಚಿಯೊಂದಿಗೆ ಸಮರ್ಥ ಅಭ್ಯರ್ಥಿಗಳನ್ನ ನಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನದೊಂದಿಗೆ ಶ್ರಮಿಸಬೇಕು ಎಂದರು.
ಸಾಗರದಲ್ಲಿ ನಡೆಯುತ್ತಿರುವ ಅಡಿಕೆ ಬೆಳೆಗಾರರ ಸಮಾವೇಶ ಮ್ಯಾಮ್ ಕೋಸ್ ಚುನಾವಣೆಯ ಒಂದು ಪೂರ್ವಭಾವಿ ಸಭೆ
ಬಿಜೆಪಿಯವರಿಗೆ ಚುನಾವಣಾ ಸಂದರ್ಭದಲ್ಲಿ ಮಾತ್ರ ರೈತರ ಸಮಸ್ಯೆಗಳ ಬಗ್ಗೆ ಜ್ಞಾನೋದಯವಾಗುತ್ತದೆ. ಇಂದು ಸಾಗರದಲ್ಲಿ ನಡೆಯುತ್ತಿರುವ ಅಡಿಕೆ ಬೆಳೆಗಾರರ ಸಮಾವೇಶವೂ ಕೂಡ ಮ್ಯಾಮ್ ಕೋಸ್ ಚುನಾವಣೆಯ ಒಂದು ಪೂರ್ವಭಾವಿ ಸಭೆ ಅಷ್ಟೇ 2014ರಲ್ಲಿ ತೀರ್ಥಹಳ್ಳಿಯಲ್ಲಿ ಅಮಿತ್ ಷಾ ಅಡಿಕೆ ಸಂಶೋಧನಾ ತೆರೆಯುವುದರೊಂದಿಗೆ 500 ಕೋಟಿ ಅನುದಾನವನ್ನು ಕೊಡುತ್ತೇನೆ ಎಂದು ಭರವಸೆ ನೀಡಿ ಮಾಯವಾಗಿದ್ದರು ಇದುವರೆಗೂ ಬಿಜೆಪಿ ಒಮ್ಮೆಯೂ ಕೂಡ ಈ ಬಗ್ಗೆ ಚಕಾರವಿಲ್ಲ. ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಬಿಜೆಪಿಯ ಕೇಂದ್ರದ ಆರೋಗ್ಯ ಸಚಿವರೆ ಹೇಳಿದ್ದಾರೆ ಮೊದಲು ಅಡಿಕೆಯಿಂದ ಕ್ಯಾನ್ಸರ್ ಬರುವುದಿಲ್ಲ ಎಂದು ಸ್ಪಷ್ಟೀಕರಣ ಕೊಡಲಿ ವಿದೇಶಿ ಅಡಿಕೆಯ ಮುಕ್ತ ಆಮದಿಗೆ ಅವಕಾಶಕೊಟ್ಟು ನಮ್ಮ ಅಡಿಕೆ ಭವಿಷ್ಯದ ಮೇಲೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಈ ಬಗ್ಗೆ ಜಿಲ್ಲೆಯ ಅಡಿಕೆ ಬೆಳೆಗಾರರು ಎಚ್ಚರ ಗೂಳ್ಳಬೇಕು ಮ್ಯಾಮ್ ಕೋಸ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮುಖಾಂತರ ಬದಲಾವಣೆಗೆ ಸಹಕರಿಸುವಂತೆ ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರಿಯವಾಗಿ ತೋಡಗಿಸಿ ಕೊಳ್ಳುವಂತೆ ಮನವಿ ಮಾಡಿದರು.
SUMMARY | Education Minister Madhu Bangarappa requested all party leaders, office-bearers and elected representatives to attend the convention and make the event a success.
KEYWORDS | Education Minister, Madhu Bangarappa, belgaum,