SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 14, 2024
ಶಿವಮೊಗ್ಗ: ಶಿವಮೊಗ್ಗ ನಗರಪಾಲಿಕೆಯಲ್ಲಿ ಇ-ಸೊತ್ತು ಗಾಗಿ ಪರಿಪಾಟಲು ಮುಂದುವರಿದಿದೆ. ಇ ಖಾತೆ ಸಿಗದೇ ಸಾರ್ವಜನಿಕರನ್ನು ಅಲೆದಾಡಿಸಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಈ ಸಂಬಂಧ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ.
ರಾಜ್ಯದ ಎಲ್ಲ ನಗರ – ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ, ಇ-ಆಸ್ತಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಅದರಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು, ಅಕ್ಟೋಬರ್ 7 ರಿಂದ ಇ – ಆಸ್ತಿ ವ್ಯವಸ್ಥೆ ಕಡ್ಡಾಯಗೊಳಿಸಿದೆ.


ಅಲ್ಲದೆ ಈ ಕಾರಣಕ್ಕೆ ಮ್ಯಾನ್ಯುವಲ್ ಆಗಿ ಖಾತೆ ನೀಡಲಾಗುತ್ತಿಲ್ಲ. ಇದಿರಿಂದಾಗಿ ಸ್ಥಿರಾಸ್ತಿಗಳ ಮಾರಾಟ, ಖರೀದಿ ಪ್ರಕ್ರಿಯೆ , ಬ್ಯಾಂಕು, ಸೊಸೈಟಿಗಳಲ್ಲಿ ಸಾರ್ವಜನಿಕರು ವ್ಯವಹರಿಸಲು ಸಾಧ್ಯವಾಗುತ್ತಿಲ್ಲ.
ಇನ್ನೂ ಪಾಲಿಕೆಯಲ್ಲಿ ಇಸ್ವೊತ್ತು ಮಾಡಿಕೊಡಲು ಲಂಚ ಕೇಳಲಾಗುತ್ತಿದೆ. ತುರ್ತಾಗಿ ಇ ಸ್ವತ್ತು ಮಾಡಿಕೊಡುವ ವ್ಯವಸ್ಥೆಗೆ ಲಂಚ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಜನಸಾಮಾನ್ಯರಿಗೆ ನೂತನ ವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಮಾಹಿತಿಯು ಲಭ್ಯವಾಗುತ್ತಿಲ್ಲ. ಇಸ್ವತ್ತಿಗಾಗಿ ಬರುವ ನಾಗರಿಕರಿಗೆ ಆದಾಗ ಆಗುತ್ತದೆ ಎಂಬ ಉತ್ತರ ಸಿಗುತ್ತಿದೆ. ಅಲ್ಲದೆ ದಾಖಲಾತಿಗಳ ನೆಪವೊಡ್ಡಿ ಸಬೂಬು ಹೇಳಲಾಗುತ್ತಿದೆ.
ಮಹಾನಗರ ಪಾಲಿಕೆಯ ಉಪ ಆಯುಕ್ತ (ಕಂದಾಯ ವಿಭಾಗದ) ಅಧಿಕಾರಿ ನೇರವಾಗಿ ಸಾರ್ವಜನಿಕರಿಗೆ ಹತ್ತರಿಂದ ಇಪ್ಪತ್ತು ಸಾವಿರದವರೆಗೆ ಹಣದ ಬೇಡಿಕೆ ಇಡುತ್ತಿದ್ದು. ಸಾರ್ವಜನಿಕರು ಪಾಲಿಕೆ ಮತ್ತು ಜಿಲ್ಲಾಡಳಿತದ ವಿರುದ್ಧ ಹಿಡಿ ಶಾಪವನ್ನು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.
ಜಿಲ್ಲಾಧಿಕಾರಿಗಳು ಕೂಡಲೇ ಮಹಾನಗರ ಪಾಲಿಕೆಗೆ ಭೇಟಿ ನೀಡಿ ಸಂಬಂಧಪಟ್ಟ ಕಂದಾಯ ವಿಭಾಗದ ಅಧಿಕಾರಿಗಳ ಲಾಗಿನ್ ಗಳನ್ನು ಪರಿಶೀಲಿಸಿ ತ್ವರಿತಗತಿಯಲ್ಲಿ ಇ – ಆಸ್ತಿ ಸಾರ್ವಜನಿಕರಿಗೆ ನೀಡುವುದರೊಂದಿಗೆ ನಾಗರಿಕರಿಗೆ ಹಣದ ಬೇಡಿಕೆ ಇಡುತ್ತಿರುವ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ ಜನರಿಗೆ ಸೂಕ್ತ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದ್ದಾರೆ.
SUMMARY| District Youth Congress today submitted a memorandum to the Deputy Commissioner e-property.
KEYWORDS | District Youth Congress, Deputy Commissioner, e-property