SHIVAMOGGA | MALENADUTODAY NEWS | ಮಲೆನಾಡು ಟುಡೆ Dec 17, 2024
ಹಾಗೂ ಹೀಗೂ ಕಷ್ಟಪಟ್ಟು ದುಡಿದದ್ದರಲ್ಲಿ ಒಂದಿಷ್ಟು ಕೂಡಿಟ್ಟು, ಚಿನ್ನ ಬೆಳ್ಳಿ ಖರೀದಿಸಿ, ಅದನ್ನು ಭವಿಷ್ಯದ ಸಂಕಷ್ಟಕ್ಕಾಗಿ ಬೀರುವಿನಲ್ಲಿ ಕಾದಿಟ್ಟು ಬದುಕುವ ಮಧ್ಯಮವರ್ಗಕ್ಕೆ ತಮ್ಮ ಸ್ವತ್ತು ಕಳುವಾದರೆ ಜೀವ ಹೋದಷ್ಟೆ ನೋವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಕಳುವಾದ ವಸ್ತು ಸಿಗುತ್ತದೆ ಎಂಬ ನಂಬಿಕೆಯು ಅವರಲ್ಲಿ ಇರುವುದಿಲ್ಲ. ಅಂತಹ ನಂಬಿಕೆಯನ್ನ ಮತ್ತೆ ಮೂಡಿಸಿದಾಗ ಪೊಲೀಸ್ ಇಲಾಖೆಗೆ ಮಧ್ಯಮವರ್ಗದ ಮಂದಿ ಕೈ ಎತ್ತಿ ಮುಗಿಯುತ್ತಾರೆ. ನಿನ್ನೆ ಸಹ ಶಿವಮೊಗ್ಗ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮಧ್ಯಮವರ್ಗದ ಮಂದಿ ಕಣ್ತುಂಬಿಕೊಂಡು ಥ್ಯಾಂಕ್ಸ್ ಹೇಳಿದರು. ಅದರಲ್ಲಿಯು ವಿಶೇಷವಾಗಿ ಮಹಿಳೆಯರು ಕಳುವಾಗಿದ್ದ ತಮ್ಮ ವಸ್ತುಗಳನ್ನ ಪಡೆದು ಅಧಿಕಾರಿಗಳ ಕೆಲಸವನ್ನ ಎಸ್‌ಪಿ ಮಿಥುನ್ ಕುಮಾರ್ ಮುಂದೆ ಹಾಡಿ ಹೊಗಳಿದರು.
ಕಳೆದುಹೋದ ಮೊಬೈಲ್ ಇರಬಹುದು, ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ ಚಿನ್ನದ ಚೈನೇ ಇರಬಹುದು, ಬೈಕ್‌ನಲ್ಲಿ ಬಂದು ಕಿತ್ತುಕೊಂಡು ಹೋದ ತಾಳಿಸರವಿರಬಹುದು. ಅಥವಾ ಮನೆಯ ಬೀರುವಿನಲ್ಲಿಟ್ಟಿದ ಬೆಳ್ಳಿ ಬಂಗಾರವೇ ಇರಬಹುದು. ಮಹಿಳೆಯರಿಗೆ ತಮ್ಮ ವಸ್ತುಗಳ ಬಗ್ಗೆ ಒಂದು ರೀತಿಯ ಭಾವನಾತ್ಮಕ ಭಾಂದವ್ಯ ಇರುತ್ತದೆ. ಅದೇ ರೀತಿಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಲ್ಲಿಯು ಕಳುವಾದ ವಸ್ತುಗಳನ್ನು, ಮತ್ತೆ ವಾಪಸ್ ಕೊಡಿಸುವಾಗ ಒಂದು ರೀತಿಯ ವಿಶೇಷ ಭಾವವಿರುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಪವಿತ್ರ ಎನಿಸುವ ತಾಳಿಸರ ಕಳುವಾದಾಗ ಅದನ್ನು ವಾಪಸ್ ಕೊಡಿಸುವ ಸಂದರ್ಭದಲ್ಲಿ ಆ ಹೆಣ್ಣುಮಕ್ಕಳ ಕಣ್ಣಲ್ಲಿ ಒಂದು ರೀತಿಯ ವಿಶಿಷ್ಟ ಸಂತೃಪ್ತ ಭಾವ ಕಾಣುತ್ತದೆ. ಅದನ್ನು ನೋಡುತ್ತಾ, ಡಿಪಾರ್ಟ್‌ಮೆಂಟ್‌ಗೆ ಸೇರಿದ್ದು ಸಾರ್ಥಕವಾಯ್ತು ಎಂಬಂತಹ ಭಾವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಲ್ಲಿ ಮೂಡುತ್ತದಯಷ್ಟೆ ಅಲ್ಲದೆ ಇನ್ನಷ್ಟು ಕೆಲಸ ಮಾಡುವಂತೆ ಪ್ರೇರಪಿಸುತ್ತದೆ. ಅನ್ಯ ವಿಚಾರಗಳೇನೆ ಇದ್ದರು, ಸಾಮಾನ್ಯರ ವಸ್ತುಗಳು ವಾಪಸ್ ಕೊಡಿಸುವ ಸಂತೋಷದಲ್ಲಿ ನಿನ್ನೆ ದಿನ ಶಿವಮೊಗ್ಗದ ಪೊಲೀಸ್ ಇಲಾಖೆ ಭಾಗಿಯಾಗಿತ್ತು.
ಈ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೆಲಸಕ್ಕೆ ವಿಶೇಷವಾಗಿ ಮಹಿಳೆಯರು ಥ್ಯಾಂಕ್ಸ್ ಹೇಳಿದರು. ಭದ್ರಾವತಿಯಲ್ಲಿ ನಡೆದಿದ್ದ ಚಿನ್ನ ಕಳ್ಳತನ ಪ್ರಕರಣವನ್ನ ಎರಡು ದಿನದಲ್ಲಿಯೇ ಭೇದಿಸಿದ ಪೊಲೀಸರಿಗೆ, ಸ್ವತ್ತಿನ ವಾರಸುದಾರ ಮಹಿಳೆಯು ಧನ್ಯವಾದ ತಿಳಿಸಿದ್ದಷ್ಟೆ ಅಲ್ಲದೆ, ಎಸ್‌ಪಿಯವರ ಮುಂದೆ ಪೊಲೀಸ್ ಸಿಬ್ಬಂದಿಯ ಗುಣಗಾನ ಮಾಡಿದರು
ಹೀಗೆ ಹಲವರು ತಮ್ಮ ಸ್ವತ್ತು ವಾಪಸ್ ಪಡೆದುಕೊಂಡು ಪೊಲೀಸ್ ಇಲಾಖೆಗೆ ಧನ್ಯವಾದ ಹೇಳಿದರು. ಕಳುವಾಗಿದ್ದು ಮತ್ತೆ ಸಿಕ್ಕ ಸಂತೋಷದಲ್ಲಿದ್ದ ಜನರ ನಡುವೆ ಪೊಲೀಸ್ ಇಲಾಖೆ ವರ್ಷದ ಲೆಕ್ಕ ಕೊಟ್ಟು, ಮಾಡಿದ ಸಾಧನೆಯ ಪಟ್ಟಿಯನ್ನ ಮುಂದಿಟ್ಟಿತ್ತು.
SUMMARY | Women in Shimoga thank police for recovering stolen items
KEY WORDS | Women in Shimoga thank police , stolen items, shivamogga police , shivamogga malenadutoday today ,Property Return Parade , bhadravati police , sp mithun kumar