SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 28, 2025
ಶಿವಮೊಗ್ಗ | ಜಿಲ್ಲೆಯಲ್ಲಿ ರಾತ್ರಿಯ ವೇಳೆ ಅಪಘಾತ ಹೆಚ್ಚಾಗುತ್ತಿರುವ ಹಿನ್ನಲೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆಯೊಂದನ್ನು ಹಮ್ಮಿಕೊಂಡಿದೆ.
ಅದೇನೆಂದರೆ ರಾತ್ರಿ ಹೊತ್ತು ಸಂಚರಿಸುವ ಗೂಡ್ಸ್ ವಾಹನಗಳು ಟ್ರ್ಯಾಕ್ಟ್‌ರ್ ಹಾಗೂ ಎತ್ತಿನಗಾಡಿಗಳಿಗೆ ಪೊಲೀಸರು ರಿಫ್ಲೆಕ್ಟರ್ ಸ್ಟಿಕ್ಕರ್‌ಗಳನ್ನು ಅಳವಡಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ನೇತೃತ್ವದಲ್ಲಿ ಶಿಕಾರಿಪುರ ಉಪ ವಿಭಾಗದ ಶಿಕಾರಿಪುರ ಟೌನ್ ಎಪಿಎಂಸಿ ಹತ್ತಿರ ಹಾಗೂ ಸಾಗರ ಉಪವಿಭಾಗದ ಆನಂದಪುರದಲ್ಲಿ ವಾಹಾನಗಳಿಗೆ ರಿಫ್ಲೆಕ್ಟ್‌ರ್ ಸ್ಟಿಕ್ಕರ್‌ಗಳನ್ನು ಅಂಟಿಸಿದರು. ಅಷ್ಟೇ ಅಲ್ಲದೆವಾಹನಗಳಿಗೆ ಅಳವಡಿಸಲಾಗಿದ್ದ ಕರ್ಕಷ ದ್ವನಿಯನ್ನು ಉಂಟುಮಾಡುವ ಸೌಂಡ್ ಸ್ಪೀಕರ್‌ಗಳನ್ನು ವಾಹನಗಳಿಂದ ತೆಗೆಸಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿದರು.
ಸಾರ್ವಜನಿಕರು ತಮ್ಮ ಬಳಿ ಇರುವ ದ್ವಿಚಕ್ರ ವಾಹನ ಕಾರು ಗೂಡ್ಸ್ ವಾಹನ ಟ್ರ್ಯಾಕ್ಟ್‌ರ್ ಹಾಗೂ ಎತ್ತಿನ ಗಾಡಿಗಳಿಗೆ ರಿಫ್ಲೆಕ್ಟ್‌ರ್ ಸ್ಟಿಕ್ಕರ್‌ನ್ನು ಅಂಟಿಸುವುದರಿಂದ ವಾಹನಗಳ ಗೋಚರತೆ ಹೆಚ್ಚಾಗಿ ಅಪಘಾತವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಆದ್ದರಿಂದ ಸುರಕ್ಷತೆಯ ದೃಷ್ಠಿಯಿಂದ ಎಲ್ಲರೂ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸಿ, ಇದರಿಂದ ನೀವು ಅಪಘಾತದಿಂದ ಆಗುವ ಪ್ರಾಣಾಪಾಯವನ್ನು ತಡೆದು ಜೀವವನ್ನು ರಕ್ಷಿಸಬಹುದಾಗಿರುತ್ತದೆ ಎಂದು ಮಿಥುನ್ ಕುಮಾರ್ ಅಭಿಪ್ರಾಯ ಪಟ್ಟರು.
ಈ ವರೆಗೆ ಶಿವಮೊಗ್ಗ – ಬಿ ಉಪ ವಿಭಾಗದಲ್ಲಿ – 139, ಭದ್ರಾವತಿ ಉಪ ವಿಭಾಗದಲ್ಲಿ – 243, ಸಾಗರ ಉಪ ವಿಭಾಗದಲ್ಲಿ –149, ಶಿಕಾರಿಪುರ ಉಪ ವಿಭಾಗದಲ್ಲಿ –166 ಮತ್ತು ತೀರ್ಥಹಳ್ಳಿ ಉಪ ವಿಭಾಗದಲ್ಲಿ –22, ಸೇರಿ ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 719 ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ.
SUMMARY | The police department has launched a special drive to prevent accidents at night in the district.
KEYWORDS | police department, accidents, Reflector,