ಸಮಸ್ತ ಹಿಂದೂಗಳ ಪರವಾಗಿ ಉತ್ತರ ಪ್ರದೇಶದ ಸರ್ಕಾರಕ್ಕೆ ಧನ್ಯವಾದಗಳು | ಎಸ್‌ ಎನ್‌ ಚೆನ್ನಬಸಪ್ಪ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 1, 2025

ಶಿವಮೊಗ್ಗ | ಉತ್ತರ ಪ್ರದೇಶದ ಸರ್ಕಾರ 45 ದಿನಗಳ ಕಾಲ ಬಹಳಾ ವ್ಯವಸ್ಥಿತವಾಗಿ ಹಾಗೂ ಅತ್ಯಂತ ಯಶಸ್ವಿಯಾಗಿ ಕುಂಭಮೇಳವನ್ನು ನಡೆಸಿದೆ. ಅದರ ಪರಿಣಾಮ ಇಡೀ ದೇಶ ಸಂಭ್ರಮದಿಂದ ಪ್ರಯಾಗದ ಕುಂಭಮೇಳವನ್ನು ವೀಕ್ಷಿಸಿದ್ದಾರೆ. ಹಾಗಾಗಿ  ಉತ್ತರ ಪ್ರದೇಶದ ಸರ್ಕಾರಕ್ಕೆ ಸಮಸ್ತ ಹಿಂದೂಗಳ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದು ಶಿವಮೊಗ್ಗ ನಗರ ಶಾಸಕ ಎಸ್‌ ಎನ್ ಚೆನ್ನಬಸಪ್ಪ ತಿಳಿಸಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕುಂಭಮೇಳದಲ್ಲಿ ಸುಮಾರು  64 ಕೋಟಿ 23 ಲಕ್ಷ ಜನ ಪ್ರತ್ಯಕ್ಷವಾಗಿ ಭಾಗವಹಿಸಿದ್ದಾರೆ. ಇದೊಂದು ಅವಿಸ್ಮರಣೀಯ ಕಾರ್ಯ. ಗಂಗಾ ಯಮುನಾ ಸೇರುವಂತಹ ಜಾಗಕ್ಕೆ ಹೋಗುವುದು ಒಂದು ಭಾವನಾತ್ಮಕ ಸಂಗತಿ. ಇದು ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿ ಚೈತನ್ಯವನ್ನು ತುಂಬಿರುವಂತಹದ್ದು. ಪ್ರಯಾಗದ ಕುಂಭ ಮೇಳ ಈ ಒಂದು ವಾತಾವರಣವನ್ನು ಸೃಷ್ಟಿಸಿರುವುದು ನಮ್ಮ ಹೆಮ್ಮೆ ಎಂದರು.

Malenadu Today

ದೇಶ ವಿದೇಶಗಳಿಂದ ಆಗಮಿಸಿದ್ದರು. ಭಾರತ ವಿಶ್ವ ಗುರು ಆಗುತ್ತದೆ ಎನ್ನುವುದನ್ನು ಅನೇಕ ಜನರು ಹೇಳುತ್ತಾರೆ. ವಿದೇಶಿಗರು ಭಾರತೀಯರು ಎಲ್ಲಾರೂ ಬಂದಿದ್ದರು. ಇದರಿಂದಾಗಿ ಭಾರತ ನೂರಕ್ಕೆ ನೂರರಷ್ಟು  ವಿಶ್ವ ಗುರು ಆಗುತ್ತದೆ ಎನ್ನುವುದಕ್ಕೆ ಎರಡು ಮಾತಿಲ್ಲ ಎಂಬ ನಂಬಿಕೆ ಇದೆ ಎಂದರು.  ಇಲ್ಲಿ ನಾವು ಒಂದು ಮಾರಿ ಜಾತ್ರೆಯನ್ನು ಮಾಡಲು ವಿಶೇಷವಾಗಿ ಯೋಜನೆಯನ್ನು ರೂಪಿಸುತ್ತೇವೆ. ಆದರೆ ಅಲ್ಲಿ ಅಷ್ಟು ದೊಡ್ಡ ಕುಂಭಮೇಳಕ್ಕೆ ಅಲ್ಲಿನ ಸರ್ಕಾರ ವ್ಯವಸ್ಥೆ ಮಾಡಿರುವುದು ಸಾಧಾರಣದ ಮಾತಲ್ಲ. ಇದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಮತ್ತು ಅವರ ತಂಡ ವ್ಯವಸ್ಥಿತವಾಗಿ ನಡೆಸಿದ್ದಾರೆ ಎಂದರು.

SUMMARY | Shivamogga city MLA S N Chennabasappa said that he would like to thank the Uttar Pradesh government on behalf of all Hindus.

KEYWORDS | Shivamogga, S N Channabasappa, Uttar Pradesh government,  maha kumbh,

Share This Article