ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 26, 2025

ಚಿಕ್ಕಮಗಳೂರು | ಚಿಕ್ಕಮಗಳೂರಿನ  ಕಳಗೂರು ಎಂಬಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವನ್ನಪ್ಪಿರುವ  ಘಟನೆ ನಡೆದಿದೆ.  ಕಾವ್ಯ (11) ಮೃತ ಬಾಲಕಿ ಎಂದು ತಿಳಿದುಬಂದಿದೆ.

- Advertisement -

ಬಾಲಕಿಯ ಪೋಷಕರು ರವಿ ಎಂಬುವವರ ನರ್ಸರಿಯಲ್ಲಿ  ಕೆಲಸ ಮಾಡುತ್ತಿದ್ದರು. ಆ ವೇಳೆ ಅವರೊಂದಿಗೆ ಬಂದಿದ್ದ ಕಾವ್ಯ ಕೃಷಿ ಹೊಂಡದ ನೀರಿನಲ್ಲಿ ಆಟವಾಡಲು ಹೋಗಿದ್ದಾರೆ. ಆಟವಾಡುತ್ತಾ ಕೃಷಿ ಹೊಂಡದ ಮಧ್ಯ ತಲುಪಿ ಮುಳುಗಿ ಸಾವನ್ನಪ್ಪಿದ್ದಾರೆ. ಕೃಷಿ ಹೊಂಡಕ್ಕೆ ಸುತ್ತ ಸುರಕ್ಷತೆ ಇಲ್ಲದ ಕಾರಣ ಅವಘಡ ಸಂಭವಿಸಿದ್ದು, ಮಾಲೀಕನ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಆಲ್ಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

SUMMARY | A girl died after falling into an agricultural pond at Kalagur in Chikmagalur. The deceased has been identified as Kavya (11).

KEYWORDS |  agricultural pond, Chikmagalur, died,

Share This Article
1 Comment

Leave a Reply

Your email address will not be published. Required fields are marked *