ಹಬ್ಬದ ಪ್ರಯುಕ್ತ ಹುಲಿ ಸಿಂಹಧಾಮ ಮಂಗಳವಾರ ವೀಕ್ಷಣೆಗೆ ಲಭ್ಯ

ಹಂಚಿಕೊಳ್ಳಿ
WhatsApp Facebook X Telegram
ಹಬ್ಬದ ಪ್ರಯುಕ್ತ ಹುಲಿ ಸಿಂಹಧಾಮ ಮಂಗಳವಾರ ವೀಕ್ಷಣೆಗೆ ಲಭ್ಯ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 26, 2025

ರಂಜಾನ್‌ ಹಾಗೂ ಯುಗಾದಿ ಹಬ್ಬದ ಹಿನ್ನಲೆ  ರಜೆ ಇರುವ ಕಾರಣ  ಏಪ್ರಿಲ್‌ 1ರ ಮಂಗಳವಾರವೂ ಸಹ ತ್ಯಾವರೆಕೊಪ್ಪದ ಮೃಗಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಸಾಮಾನ್ಯವಾಗಿ ತ್ಯಾವರೆಕೊಪ್ಪದ ಹುಲಿ ಸಿಂಹಧಾಮ ಮಂಗಳವಾರ ರಜೆ ಇರುತ್ತದೆ. ಆದರೆ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ ಇರುವ ಕಾರಣ ಮೃಗಾಲಯಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಏ.01 ರ ಮಂಗಳವಾರವೂ ಸಹ ಮೃಗಾಲಯವನ್ನು ತೆರೆಯಲಾಗಿದ್ದು, ಪ್ರವಾಸಿಗರು ಇದರ ಸದುಪಯೋಗ ಪಡೆಯಬೇಕೆಂದು ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

SUMMARY | The zoo at Tyavarekoppa will also be open for viewing on Tuesday, April 1

KEYWORDS | Tyavarekoppa,  zoo, Tuesday, April 1,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor