ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 27 2025 : ಶಿವಮೊಗ್ಗದಲ್ಲಿ ಈ ಹಿಂದೆ ನಡೆದಿದ್ದ ಗ್ಯಾಂಗ್ ವಾರ್ನಲ್ಲಿ ಸಾವನ್ನಪ್ಪಿದ್ದ ಯಾಸಿನ್ ಖುರೇಶಿ ವಿಚಾರ ಇಬ್ಬರು ಯುವಕರನ್ನ ಅಪಹರಿಸಿದ್ದಷ್ಟೆ ಅಲ್ಲದೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಕಳೆದ ಸೆಪ್ಟೆಂಬರ್ 22 ರಂದು ನಡೆದಿದ್ದ ಘಟನೆಯ ಸಂಬಂಧ ಸೆಪ್ಟೆಂಬರ್ 24 ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ.
THE BHARATIYA NYAYA SANHITA (BNS), 2023 (U/s-118(1),189(2),191(2),191(3),115(2),140(2),351(2),352,190)ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಕೋರ್ಟ್ ವಿಚಾರಣೆಗೆ ಎಂದು ಬಂದಿದ್ದ ಇಬ್ಬರು ಯುವಕರನ್ನು(ಹೆಸರನ್ನು ಉಲ್ಲೇಖಿಸುವುದಿಲ್ಲ) ಆರ್ಟಿಓ ಕಚೇರಿ ಸಮೀಪದಿಂದ ಆರೋಪಿಗಳು ಅಲ್ಲಿ ಸಮೀಪ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆ ಬಳಿಕ ಅವರನ್ನು ಮತ್ತೊಂದು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದವರ ಮೊಬೈಲ್ನಲ್ಲಿ ಮೃತ ಯಾಸಿನ್ ಖುರೇಶಿಗೆ ಸಂಬಂಧಿಸಿದ ಫೋಟೋಗಳನ್ನು ಮೊಬೈಲ್ ಕಿತ್ತುಕೊಂಡು ಪರಿಶೀಲಿಸಿದ ಆರೋಪಿಗಳು, ಯಾಕೆ ಯಾಸಿನ್ ಖುರೇಶಿಗೆ ಸಂಬಂಧಿಸಿದ ಸ್ಟೇಟಸ್ ಹಾಕುತ್ತೀಯಾ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂತಸ್ತರು ದೂರಿನಲ್ಲಿ ತಿಳಿಸಿದ್ದಾರೆ. ಇದೇ ವೇಳೆ 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಹ ಆರೋಪಿಸಲಾಗಿದೆ. ಯಾಸಿನ್ ಖುರೇಶಿ ವಿಚಾರಕ್ಕೆನೆ ಇಬ್ಬರು ಸಂತ್ರಸ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಈಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
Youths Kidnapped for Keeping Yaseen Qureshis Photo
Shivamogga court, Who is Yaseen Qureshi follower, Reason for assault in Shivamogga, Shivamogga police station FIR, KR Puram Shivamogga, MalenaduToday News, RTO Office Shivamogga, ಶಿವಮೊಗ್ಗ, ಗ್ಯಾಂಗ್ ಹಲ್ಲೆ, ಅಪಹರಣ,
ಇದನ್ನು ಸಹ ಓದಿ ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
