ವಿಪರೀತ ಮಳೆ, ಮನೆಯ ಮೇಲೆ ಬಿದ್ದ ಮರ

Tree Collapse : ವಿಪರೀತ ಮಳೆ, ಮನೆಯ ಮೇಲೆ ಬಿದ್ದ ಮರ

ಸೊರಬ: ಕಳೆದ ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕ್ಯಾಸನೂರು ಗ್ರಾಮದ ವಾಸಪ್ಪ ಎಂಬುವವರ ಮನೆಯ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಪರಿಣಾಮವಾಗಿ ಮನೆಗೆ ಭಾಗಶಃ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮನೆ ಮತ್ತು ಕಾರು ನಿಲ್ಲಿಸುವ ಸ್ಥಳದ ಮಧ್ಯಭಾಗದಲ್ಲಿ ಮರ ಬಿದ್ದಿದ್ದರಿಂದ ಕಾರಿಗೆ ಯಾವುದೇ ಹಾನಿಯಾಗಿಲ್ಲ. ಘಟನೆ ಸಂಭವಿಸುವಾಗ ವಿದ್ಯುತ್ ಸಂಪರ್ಕವೂ ಇರಲಿಲ್ಲವಾದ್ದರಿಂದ ದೊಡ್ಡ ಅನಾಹುತ ತಪ್ಪಿದ್ದು, ಮನೆಯವರು ನಿಟ್ಟುಸಿರು ಬಿಡುವಂತಾಗಿದೆ.

ಮಳೆಯಿಂದಾಗಿ ಮನೆಗೆ ಹೆಚ್ಚಿನ ಹಾನಿಯಾಗಿರುವುದರಿಂದ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಮಳೆಹಾನಿ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Tree Collapse ಮನೆ ಮೇಲೆ ಬಿದ್ದ ಮರ
Tree Collapse ಮನೆ ಮೇಲೆ ಬಿದ್ದ ಮರ

ವರದಿ ವಿಕಾಸ್​ ಕ್ಯಾಸನೂರು

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು