Tragedy Sominakoppa / ಮಗು ಮೇಲೆ ಬೀದಿನಾಯಿ ದಾಳಿ / ಸೋಮಿನಕೊಪ್ಪದಲ್ಲಿ ಏನಾಗಿದ್ದು!?

ajjimane ganesh

ಶಿವಮೊಗ್ಗ: ಮನೆ ಅಂಗಳದಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿ ದಾಳಿ, ಗಂಭೀರ ಗಾಯ

Malnad news today 

ಶಿವಮೊಗ್ಗ: ನಗರದ ಸೋಮಿನಕೊಪ್ಪದಲ್ಲಿ ಬೀದಿ ನಾಯಿಯೊಂದರ ದಾಳಿಗೆ ಮಗುವೊಂದು ಗಂಭೀರವಾಗಿ ಗಾಯಗೊಂಢಿದೆ. ಮನೆ ಅಂಗಳದಲ್ಲಿ ಆಡುತ್ತಿದ್ದ ಎರಡು ವರ್ಷದ ಮಗುವಿನ ಮೇಲೆ ಬೀದಿ ನಾಯಿ ಎರಗಿ ಮುಖ ಮತ್ತು ತುಟಿಗೆ ಗಂಭೀರವಾಗಿ ಕಚ್ಚಿದ ಘಟನೆ ನಡೆದಿದೆ. ಗಾಯಗೊಂಡ ಮಗುವನ್ನು ತಕ್ಷಣವೇ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Tragedy Sominakoppa Toddler Attacked by Stray Dog

ಸೋಮಿನಕೊಪ್ಪದ ನಿವಾಸಿಯೊಬ್ಬರ ಮಗುವೂ ಮನೆಯ ಅಂಗಳದಲ್ಲಿ ಆಡುತ್ತಿದ್ದಾಗ ಅನಿರೀಕ್ಷಿತವಾಗಿ ನಾಯಿ ದಾಳಿ ಮಾಡಿದೆ. ಮಗುವಿನ ಮುಖ ಮತ್ತು ತುಟಿಗೆ ನಾಯಿ ಕಚ್ಚಿದ್ದು,  ತೀವ್ರವಾದ ಗಾಯಗಳಾಗಿವೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಈ ಘಟನೆ ಬೆನ್ನಲ್ಲೆ ಸೋಮಿನಕೊಪ್ಪದ ನಿವಾಸಿಗಳು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಸ್ಥಳೀಯ ಆಡಳಿತವನ್ನು ಆಗ್ರಹಿಸಿದ್ದಾರೆ. 

Share This Article
Leave a Comment

Leave a Reply

Your email address will not be published. Required fields are marked *