Tirupati Darshan Made Easier 31 ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ
Tirupati Darshan Made Easier 31 ತಿರುಪತಿ (Tirupati) ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ತಿರುಮಲ ತಿರುಪತಿ ದೇವಸ್ಥಾನ (TTD) ಸಿಹಿ ಸುದ್ದಿಯನ್ನ ನೀಡಿದೆ. ವಾಟ್ಸಾಪ್ (WhatsApp) ಮೂಲಕ ಟಿಕೆಟ್ ಬುಕಿಂಗ್ (Ticket Booking) ಸೌಲಭ್ಯ, ಸೇರಿದಂತೆ ಕೆಲವೊಂದು ಅನುಕೂಲಕರ ಕ್ರಮಗಳನ್ನು ಕೈಗೊಂಡಿದೆ.
ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸುವ ಸಲುವಾಗಿ TTD ದರ್ಶನ ಟಿಕೆಟ್‌ಗಳ ಕೋಟಾವನ್ನು ದಿನಕ್ಕೆ 1500 ರಿಂದ 2000ಕ್ಕೆ ಏರಿಸಿದೆ. ಇನ್ನು ಮುಂದೆ, ತಿರುಮಲದಲ್ಲಿ ಪ್ರತಿದಿನ 1500 ಕರೆಂಟ್ ಬುಕಿಂಗ್ ಟಿಕೆಟ್‌ಗಳು ಹಾಗೂ ರೇಣಿಗುಂಟ ವಿಮಾನ ನಿಲ್ದಾಣದಲ್ಲಿ 500 ಟಿಕೆಟ್‌ಗಳು ಲಭ್ಯವಿರುತ್ತವೆ.

ಇಷ್ಟೆ ಅಲ್ಲದೆ TTD ವಾಟ್ಸಾಪ್ ಮೂಲಕ ದರ್ಶನ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಆರಂಭಿಸಿದೆ. ಭಕ್ತರು ತಮ್ಮ ಸಂಪರ್ಕ ಪಟ್ಟಿಯಲ್ಲಿ 9552300009 ಸಂಖ್ಯೆಯನ್ನು ಸೇವ್ ಮಾಡಿಕೊಂಡು, ವಾಟ್ಸಾಪ್‌ನಲ್ಲಿ ‘HI’ ಎಂದು ಮೆಸೇಜ್ ಕಳುಹಿಸಬೇಕು. ತಕ್ಷಣವೇ ಆಂಧ್ರಪ್ರದೇಶ ಸರ್ಕಾರಿ ನಾಗರಿಕ ಸಹಾಯಕ ಸೇವೆಯಿಂದ ಸ್ವಾಗತ ಸಂದೇಶ ಬರಲಿದ್ದು, ಅದರಲ್ಲಿ ‘ಲೈವ್ ದರ್ಶನ’ ಆಯ್ಕೆಯನ್ನು ಆರಿಸಿ, ಆನ್‌ಲೈನ್‌ನಲ್ಲಿ ಹಣ ಪಾವತಿಸಿದರೆ ಟಿಕೆಟ್ ದೊರೆಯುತ್ತದೆ.
ಇನ್ನೊಂದೆಡೆ ತಿರುಮಲಕ್ಕೆ ದೂರದ ಊರುಗಳಿಂದ ಬರುವ ಭಕ್ತರ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವ ಸಲುವಾಗಿ ಭಾರತ್ ಮಾಲಾ ಯೋಜನೆಯಡಿ ಹೊಸ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ₹1,852.12 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಈ ರಸ್ತೆಯನ್ನು ಈಗ 4 ಪಥಗಳಿಗೆ ವಿಸ್ತರಿಸಲಾಗಿದೆ.
ಪೀಲೇರು, ಕಲಿಕಿರಿ ಮತ್ತು ವಾಲ್ಮೀಕಿಪುರಂ ಮೂಲಕ ಹಾದು ಹೋಗುವ ಈ ಮಾರ್ಗದಲ್ಲಿ ತಿರುಪತಿಯಿಂದ ಮದನಪಲ್ಲಿಗೆ 2.5 ಗಂಟೆಗಳಲ್ಲಿ ತಲುಪಬಹುದು.ಈ ಮೊದಲು ನಾಲ್ಕು ಗಂಟೆ ಬೇಕಾಗುತ್ತಿತ್ತು.

tickets online, book Tirupati darshan, Tirupati special entry darshan, Tirupati WhatsApp booking number, TTD official website, Tirupati updates, Tirupati latest news, TTD WhatsApp booking, ತಿರುಪತಿ ದರ್ಶನ, ಟಿಟಿಡಿ, ಶ್ರೀ ವೆಂಕಟೇಶ್ವರ ಸ್ವಾಮಿ, ದರ್ಶನ ಕೋಟಾ, ತಿರುಪತಿ ಪ್ರಯಾಣ, ಡಿಜಿಟಲ್ ಬುಕಿಂಗ್, Tirupati Darshan, TTD, Tirumala #TirupatiDarshan, #TTD, #Tirumala, #WhatsAppBooking
