Thalaguppa ಶಿವಮೊಗ್ಗ, malenadu today news : ತಾಳಗುಪ್ಪ ಟು ಮೈಸೂರು ಟ್ರೈನ್ವೊಂದರ ಬೋಗಿಗಳ ನಡುವಿನ ಲಿಂಕ್ ಕಟ್ಟಾಗಿ, ಟ್ರೈನ್ನ ಬೋಗಿಗಳು ಬೇರ್ಪಟ್ಟ ಘಟನೆ ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಬಳಿಯಲ್ಲಿ ಸಂಭವಿಸಿದೆ.
ಘಟನೆಯಲ್ಲಿ ರೈಲಿನ ಒಂದಷ್ಟು ಬೋಗಿಗಳು ಸೇತುವೆ ಮೇಲೆ ನಿಂತಿದ್ದವು. ಇನ್ನೊಂದಿಷ್ಟು ಬೋಗಿಗಳು ಮಲ್ಲೇಶ್ವರ ರೈಲ್ವೆ ಕ್ರಾಸಿಂಗ್ನಲ್ಲಿ ನಿಂತಿದ್ದವು. ಈ ಘಟನೆಯಿಂದಾಗಿ ಸ್ಥಳಿಯರು ಸೇರಿದಂತೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು.
ಸಾಮಾನ್ಯವಾಗಿ ರೈಲು, ಸೇತುವೆಗಳ ಸಮೀಪ ಹಾಗೂ ಸೇತುವೆಗಳ ಮೇಲೆ ನಿಧಾನವಾಗಿ ಸಂಚರಿಸುತ್ತವೆ. ಈ ಹಿನ್ನೆಲೆಯಲ್ಲಿ ಇವತ್ತು ಬೋಗಿಗಳು ಬೇರ್ಪಟ್ಟರೂ ಯಾವುದೇ ಅಪಾಯ ಸಂಭವಿಸಿಲ್ಲ. ಸೇತುವೆ ಮೇಲೆ ರೈಲ್ವೆ ಬೋಗಿಗಳು ಬೇರ್ಪಟ್ಟ ಬೆನ್ನಲ್ಲೆ, ಅದನ್ನು ಗಮನಿಸಿದ ಲೋಕೋ ಪೈಲೆಟ್ ತಕ್ಷಣ ರೈಲನ್ನು ನಿಲ್ಲಿಸಿದರು.
ಬಳಿಕ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ದೌಡಾಯಿಸಿದ್ದು, ಬೋಗಿಗಳನ್ನು ಮತ್ತೆ ಸೇರಿಸುವ ಕೆಲಸದಲ್ಲಿ ನಿರತರಾದರು. ಅಷ್ಟೊತ್ತಿಗಾಗಲೇ ಮಲ್ಲೇಶ್ವರ ಕ್ರಾಸಿಂಗ್ನಲ್ಲಿ ನಿಂತಿದ್ದ ಬೋಗಿಗಳನ್ನು ನೋಡುತ್ತಾ, ಏನಾಯ್ತು ಎಂದು ವಿಚಾರಿಸುವವರ ಸಂಖ್ಯೆ ಎಲ್ಲೆ ಮೀರಿತ್ತು. ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಸ್ಥಳದಿಂದ ತೆರಳುವಂತೆ ಮಾಡಿದರು.
ಇನ್ನೂ ಸುಮಾರು ಮುಕ್ಕಾಲು ಗಂಟೆಯ ಕಾರ್ಯಾಚರಣೆ ನಡೆಸಿ ರೈಲ್ವೆ ಸಿಬ್ಬಂದಿಗಳು ಲಿಂಕ್ ತಪ್ಪಿದ್ದ ಬೋಗಿಗಳನ್ನು ಸೇರಿಸಿದರು. ಅಂತಿಮವಾಗಿ ರೈಲು ಮೈಸೂರು ಕಡೆಗೆ ಪ್ರಯಾಣ ಬೆಳಸಿತು. ಇಷ್ಟರೊಳಗೆ ಜನರು ತುಂಗಾ ನದಿಯ ಸಮೀಪದಲ್ಲಿಯೇ ಇಷ್ಟೆಲ್ಲಾ ನಡೆದಿದ್ದನ್ನು ನೆನೆದು, ಸದ್ಯ ಏನು ಆಗಲಿಲ್ಲ ಎಂದು ನಿಟ್ಟಿಸಿರು ಬಿಟ್ಟರು. ಒಟ್ಟಾರೆ ಘಟನೆಯಲ್ಲಿ ಅನ್ ಕಪ್ಲಿಂಗ್ ಆಗಿ ತಾಳಗುಪ್ಪ- ಮೈಸೂರು ರೈಲಿನ ಆರು ಬೋಗಿಗಳು ಕಳಚಿಕೊಂಡಿದ್ದವು.
View this post on Instagram