snake rescue : ಶೂ ಸ್ಟ್ಯಾಂಡ್ ಕೆಳಗೆ ಹೆಡೆ ಎತ್ತಿದ ನಾಗರ ಹಾವು
snake rescue : ಶಿವಮೊಗ್ಗ : ಶಿವಮೊಗ್ಗದ ಕೃಷಿ ನಗರ 2ನೇ ಮುಖ್ಯರಸ್ತೆಯಲ್ಲಿರುವ ಚಂದ್ರಶೇಖಪ್ಪ ಅವರ ಮನೆಯಲ್ಲಿ ಶೂ ಸ್ಟ್ಯಾಂಡ್ ಕೆಳಗೆ ಅಡಗಿದ್ದ ಸುಮಾರು ಒಂದೂವರೆ ಅಡಿ ಉದ್ದದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಯಶಸ್ವಿಯಾಗಿ ಹಿಡಿದು ರಕ್ಷಿಸಿದ್ದಾರೆ.
ಇಂದು ಬೆಳಿಗ್ಗೆ ಚಂದ್ರಶೇಖಪ್ಪ ಎಂಬುವವರ ಮನೆಯ ಮೆಟ್ಟಿಲಿನ ಕೆಳಗೆ ಇಟ್ಟಿದ್ದ ಶೂ ಸ್ಟ್ಯಾಂಡ್ ಬಳಿ ಹಾವು ಕಾಣಿಸಿಕೊಂಡಿದೆ. ಇದನ್ನು ನೋಡಿದ ಮನೆಯವರು ತಕ್ಷಣ ಗಾಬರಿಗೊಂಡು ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕಾಗಮಿಸಿದ ಕಿರಣ್, ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಮಳೆಗಾಲ ಹೆಚ್ಚಾಗಿರುವುದರಿಂದ ಹಾವುಗಳು ಬೆಚ್ಚಗಿನ ಮತ್ತು ಒಣ ಪ್ರದೇಶಗಳನ್ನು ಹುಡುಕಿಕೊಂಡು ಮನೆಗಳಿಗೆ ನುಗ್ಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಮನೆಯ ಮೆಟ್ಟಿಲುಗಳ ಕೆಳಗೆ, ಶೂ ಸ್ಟ್ಯಾಂಡ್‌ಗಳಲ್ಲಿ, ಶೂಗಳ ಒಳಗೆ ಮತ್ತು ಇತರ ಮುಚ್ಚಿದ ಪ್ರದೇಶಗಳಲ್ಲಿ ಹಾವುಗಳು ಅಡಗಿಕೊಳ್ಳಬಹುದು. ಈ ಸಂದರ್ಭದಲ್ಲಿ ಶೂಗಳನ್ನು ಧರಿಸುವಾಗ ಮತ್ತು ಅಂತಹ ಸ್ಥಳಗಳನ್ನು ಪರಿಶೀಲಿಸುವಾಗ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಉರಗ ತಜ್ಞರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

