ಶಿವಮೊಗ್ಗದಲ್ಲಿ ಕಾರಿನೊಳಗೆ ಸೇರಿದ್ದ ಹಾವಿನ ಮರಿ ರಕ್ಷಣೆ

Snake Kiran snake rescue ಶಿವಮೊಗ್ಗದಲ್ಲಿ ಕಾರಿನೊಳಗೆ ಸೇರಿದ್ದ ಹಾವಿನ ಮರಿ ರಕ್ಷಣೆ

 ಶಿವಮೊಗ್ಗ, ಜುಲೈ 31, 2025: ಮಳೆಗಾಲದಲ್ಲಿ (Monsoon) ಹಾವುಗಳ ಹಾವಳಿ (Snake menace) ತುಸು ಹೆಚ್ಚೆ ಇರುತ್ತದೆ. ಈ ನಡುವೆ  ಶಿವಮೊಗ್ಗ (Shivamogga) ನಗರದ ಗುರುಪುರ ಬಳಿ ಕಾರಿನೊಳಗೆ  ಕೆರೆ ಹಾವಿನ (Water snake) ಮರಿಯೊಂದು ಸೇರಿಕೊಂಡು ತಾಪತ್ರಯ ತಂದಿಟ್ಟಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಹಾವನ್ನ ರಕ್ಷಿಸಿದ್ದಾರೆ.

Snake Kiran snake rescue
Snake Kiran snake rescue

Snake Kiran snake rescue

ಗುರುಪುರದಲ್ಲಿ ತಮ್ಮ ಕಾರನ್ನು (Car) ನಿಲ್ಲಿಸಿದ್ದ ಚಾಲಕರೊಬ್ಬರು, ಹಾವಿನ ಮರಿಯೊಂದು ಕಾರಿನೊಳಗೆ ನುಸುಳಿದ್ದನ್ನು ಗಮನಿಸಿದ್ದಾರೆ. ಬಳಿಕ ಅವರಿಗೆ ದಾರಿ ಕಾಣದೆ ಸ್ನೇಕ್ ಕಿರಣ್ (Snake Kiran)ಗೆ ಮಾಹಿತಿ ನೀಡಿದ್ದರು.ಸ್ಥಳಕ್ಕೆ ಬಂದ ಸ್ನೇಕ್ ಕಿರಣ್,   ಕೆರೆ ಹಾವಿನ ಮರಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದರು. ಆನಂತರ ಅದನ್ನು ಹತ್ತಿರದ ಅರಣ್ಯ ಪ್ರದೇಶದಲ್ಲಿ (Forest area) ಬಿಟ್ಟು ಬಂದಿದ್ದಾರೆ. 

ಶಿವಮೊಗ್ಗದಲ್ಲಿ ಮಳೆ ಹೆಚ್ಚಾಗಿರುವ ಕಾರಣ, ಹಾವುಗಳು, ಅದರಲ್ಲೂ ವಿಶೇಷವಾಗಿ ಹಾವಿನ ಮರಿಗಳು, ವಸತಿ ಪ್ರದೇಶಗಳಿಗೆ ಪ್ರವೇಶಿಸುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಜನಸಾಮಾನ್ಯರು ಭಯಭೀತರಾಗದೆ, ತಕ್ಷಣವೇ ಉರಗ ತಜ್ಞರ ಸಹಾಯ ಪಡೆಯುವಂತೆ ಸ್ನೇಕ್ ಕಿರಣ್ ಮನವಿ ಮಾಡಿದ್ದಾರೆ. 

e-paper today news july 25
e-paper today news july 25

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು