ಬಾರ್​ನಲ್ಲಿ ಫ್ರೆಂಡ್ಲಿ ಫೈಟ್/ ಗೂಗಲ್​ ರಿವ್ಯೂ ಹೆಸ್ರಲ್ಲಿ 25 ಲಕ್ಷ ಮಿಸ್ಸಿಂಗ್/ ಹ್ಯಾಕರ್ಸ್​ ನಿಮ್ಮ ಮೊಬೈಲ್​ಗೂ ಬರಬಹುದು!

Shivamogga evening news today  ಬಾರ್‌ನಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ

Shivamogga evening news today  ಶಿವಮೊಗ್ಗ ನಗರದ ಸೋಮಿನಕೊಪ್ಪದ ಬಾರ್‌ ಅಂಡ್‌ ರೆಸ್ಟೋರೆಂಟ್‌ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ. ಅಷ್ಟೆಅಲ್ಲದೆ ಈ ಗಲಾಟೆಯ ನಡುವೆ, ಓರ್ವನ ತಲೆಗೆ ಬಿಯರ್‌ ಬಾಟಲಿಯಿಂದ (Beer Bottle) ಹಲ್ಲೆ ನಡೆಸಲಾಗಿದೆ. ಆತನಿಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಸೋಮವಾರ ಘಟನೆ ನಡೆದಿದೆ. ಈತನೇ ಸ್ನೇಹಿತರೇ ಹಲ್ಲೆ ಮಾಡಿರುವುದಾಗಿ ಗೊತ್ತಾಗಿದೆ. ಬಾರ್​ನಲ್ಲಿ ಕುಡಿಯುತ್ತಿದ್ದಾಗ, ಯಾವುದೋ ವಿಚಾರಕ್ಕೆ ಜಗಳವಾಗಿ ಬಾಟಲಿಯಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.  

Shivamogga evening news today  ಗೂಗಲ್ ರಿವ್ಯೂ ಹೆಸರಿನಲ್ಲಿ ₹25.92 ಲಕ್ಷ ವಂಚನೆ 

ಗೂಗಲ್‌ನಲ್ಲಿ ಹೊಟೇಲ್‌ಗಳಿಗೆ ರಿವ್ಯೂ (Review) ನೀಡಿದರೆ, ದುಡ್ಡು ಸಿಗುತ್ತದೆ ಎಂದು ನಂಬಿಸಿ ಯುವಕನೊಬ್ಬನಿಗೆ ಬರೋಬ್ಬರಿ ₹25.92 ಲಕ್ಷ ರೂಪಾಯಿ ವಂಚಿಸಲಾಗಿದೆ. ಆರಂಭದಲ್ಲಿ ಟೆಲಿಗ್ರಾಂ ಗ್ರೂಪ್‌ ಒಂದರಲ್ಲಿ ಬಂದ ಲಿಂಕ್ ಮೂಲಕ ಯುವಕನ ಸಂಪರ್ಕಕ್ಕೆ ಬಂದ್ ಆನ್​ಲೈನ್ ಸ್ಕ್ಯಾಮರ್​ಗಳು,  ಗೂಗಲ್​ನಲ್ಲಿ ತಾವು ತೋರಿಸುವ ಹೋಟೆಲ್​ಗಳಿಗೆ ರಿವ್ಯೂ ನೀಡಿದರೆ ಹಣ ಸಿಗುತ್ತದೆ ಎಂದು ಆಮೀಷವೊಡ್ಡಿದ್ದಾರೆ. ಆನಂತರ ಇಲ್ಲದ ಆಮೀಷವೊಡ್ಡಿ ಯುವಕನಿಂದ ಹಣವನ್ನು ಹಂತ ಹಂತವಾಗಿ  ₹25.92 ಲಕ್ಷವನ್ನು ತಮ್ಮ ಅಕೌಂಟ್​ಗೆ ಹಾಕಿಕೊಂಡು ವಂಚಿಸಿದ್ದಾರೆ. ಈ ಸಂಬಂಧ  ಸಿ.ಇ.ಎನ್. ಪೊಲೀಸ್‌ ಠಾಣೆಯಲ್ಲಿ (CEN Police Station) ತನಿಖೆ ನಡೆಯುತ್ತಿದೆ. 

Shivamogga evening news today 
Shivamogga evening news today  112 Helpline

ಭದ್ರಾವತಿಯಲ್ಲಿ ಸೈಬರ್ ಕಳ್ಳರ ಕೈಚಳಕ

ಭದ್ರಾವತಿಯಲ್ಲಿ ನಿವೃತ್ತ ಉದ್ಯೋಗಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಬರೋಬ್ಬರಿ ₹5.70 ಲಕ್ಷ ಹಣ ಆನ್‌ಲೈನ್‌ನಲ್ಲಿ (Online) ವರ್ಗಾವಣೆಯಾಗಿದೆ. ಮೊಬೈಲ್ ಬ್ಯಾಂಕಿಂಗ್ ಆಪ್‌ ಅನ್ನು ಹ್ಯಾಕ್‌ (Hack) ಮಾಡಿ ಈ ಕೃತ್ಯವೆಸಗಲಾಗಿದೆ ಎಂದು ನಂಬಲಾಗಿದೆ. ಈ ಕುರಿತಾಗಿ ಬ್ಯಾಲೆನ್ಸ್​ ಟ್ರಾನ್ಸಫರ್ ಆಗಿರುವ ಎಸ್​ಎಂಎಸ್​ ನೋಡಿ ಅನುಮಾನಗೊಂಡ ಹಿರಿಯರು, ಬಳಿಕ ಬ್ಯಾಂಕ್​ನಲ್ಲಿ ವಿಚಾರಿಸಿದ್ದಾರೆ. ಆ ಬಳಿಕ ಆಪ್ ಹ್ಯಾಕ್ ಆಗಿರುವುದು ಗೊತ್ತಾಗಿದೆ. ಕೊನೆಯಲ್ಲಿ   ಸೈಬರ್ ಕೇಸ್​ಗೆ ಸಂಬಂಧಿಸಿದಂತೆ ಶಿವಮೊಗ್ಗದ​  ಸಿ.ಇ.ಎನ್.‌ ಪೊಲೀಸ್‌ ಠಾಣೆಯಲ್ಲಿ (CEN Police Station) ಪ್ರಕರಣ ದಾಖಲಾಗಿದ್ದು, ಸೈಬರ್ ವಿಭಾಗದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Shivamogga evening news today  Big news today Shivamogga Historic Gathering Malnad Seers Convene Today in Shivamogga shivamogga bhadravati davanagere today post , Missing Mother-in-Law Found in Davangere; Affair Suspected with Son-in-Law,Tragedy in Soraba Schools Colleges Closed on June 25 SIMS Medical Collegesuddi today
shivamogga bhadravati davanagere suddi today

Shivamogga evening news today 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್​ ಕ್ಲಿಕ್ ಮಾಡಿ : https://malenadutoday.com/category/shivamogga/

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು