ಶಿವಮೊಗ್ಗ ದಸರಾ 2025 : ನಾಳೆ ಶಿವಮೊಗ್ಗಕ್ಕೆ ಶಿವಣ್ಣ! ಏನೆಲ್ಲಾ ಕಾರ್ಯಕ್ರಮ!?

ajjimane ganesh

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 :   ಶಿವಮೊಗ್ಗ ದಸರಾ ಅಂದುಕೊಂಡಂತೆ ಅದ್ದೂರಿಯಾಗಿ ನಡೆಯುತ್ತಿದ್ದು ವಿವಿಧ ಕಾರ್ಯಕ್ರಮಗಳು ವಿಶೇಷವಾಗಿ ಆಯೋಜನೆಗೊಳ್ಳುತ್ತಿದೆ. ಈ ನಡುವೆ ನಾಳೆ ಶಿವಮೊಗ್ಗ ದಸರಾದಲ್ಲಿ ಏನೆಲ್ಲಾ ಕಾರ್ಯಕ್ರಮಗಳಿವೆ ಎಂಬುದರ ವಿವರವನ್ನು ಗಮನಿಸುವುದಾದರೆ, ಆ ಬಗೆಗಿನ ಮಾಹಿತಿ ಇಲ್ಲಿದೆ. 

ಸೆ.28 ರ ಕಾರ್ಯಕ್ರಮ 

ಸಮಯ-ಬೆಳಿಗ್ಗೆ 5.30 ಕ್ಕೆ, ಕಾರ್ಯಕ್ರಮ-ಯೋಗ ದಸರಾ, ಸ್ಥಳ-ಕುವೆಂಪು ರಂಗಮAದಿರ ಆವರಣ, ಉದ್ಘಾಟನೆ-ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ

- Advertisement -

ಸಮಯ-ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆವರೆಗೆ, ಕಾರ್ಯಕ್ರಮ-ಗಮಕ ಕಾರ್ಯಕ್ರಮ, ಸ್ಥಳ- ಕಮಲಾ ನೆಹರು ಕಾಲೇಜು, ಉದ್ಘಾಟನೆ-ಗಮಕ ರತ್ನಾಕರ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್

ಸಮಯ- ಬೆಳಿಗ್ಗೆ 10 ಗಂಟೆಗೆ, ಕಾರ್ಯಕ್ರಮ-ಜ್ಞಾನ ದಸರಾ, ವಿಚಾರ ಸಂಕಿರಣ: ಕರ್ನಾಟಕ ಮೊಟ್ಟಮೊದಲ ಸಾಮ್ರಾಜ್ಯ- ಕದಂಬ ಸಾಮ್ರಾಜ್ಯ ಸ್ಥಾಪಕರು, ಶಿವಮೊಗ್ಗ ಜಿಲ್ಲೆಯ ತಾಳಗುಂದದ ಮಯೂರ ಶರ್ಮಾ, ಸ್ಥಳ-ಡಾ.ಬಿ.ಆರ್.ಅಂಬೇಡ್ಕರ್ ಭವನ, ಉದ್ಘಾಟನೆ-ವಿಕಾಸ ವಿದ್ಯಾಸಮಿತಿ ಕಾರ್ಯದರ್ಶಿ ಎ.ಜೆ.ರಾಮಚಂದ್ರ, ಜಿಲ್ಲಾ ಬಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್

ಸಮಯ-ಸಂಜೆ 5 ಗಂಟೆಗೆ, ಕಾರ್ಯಕ್ರಮ- ಪತ್ರಕರ್ತರ ದಸರಾ, ಸ್ಥಳ- ಪತ್ರಿಕಾ ಭವನ, ಉದ್ಘಾಟನೆ- ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೋ.ಶರತ್ ಅನಂತಮೂರ್ತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಎನ್.ರವಿಕುಮಾರ್

Malenadu Today

ಸಮಯ-ಸಂಜೆ 5 ಗಂಟೆಗೆ, ಕಾರ್ಯಕ್ರಮ-ಮ್ಯೂಸಿಕಲ್ ನೈಟ್, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ-ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ, ವಿಶೇಷ ಆಹ್ವಾನಿತರು-ಖ್ಯಾತ ಚಲನಚಿತ್ರ ನಟ ಡಾ.ಶಿವರಾಜ್‌ಕುಮಾರ್, ಗೌರವ ಉಪಸ್ಥಿತಿ-ಸಂಸದರು, ಮುಖ್ಯ ಅತಿಥಿಗಳು-ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಮಾಜಿ ಶಾಸಕರುಗಳು

ಸಮಯ-ಸಂಜೆ 6 ಗಂಟೆಗೆ, ಕಾರ್ಯಕ್ರಮ-ಆಹಾರ ಮೇಳ, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ-ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಅವಿನ್.ಆರ್

ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shimoga Dasara 2025  September 28  Musical Night with Dr. Shivarajkumar

Share This Article
Leave a Comment

Leave a Reply

Your email address will not be published. Required fields are marked *