ಕ್ರೆಡಿಟ್​ ಕಾರ್ಡ್ ಕೈಯಲ್ಲಿಯೇ ಇದ್ದರೂ! ತಡರಾತ್ರಿ ಅಕೌಂಟ್​ನಿಂದ ಮಾಯವಾಯ್ತು 50K! ನಿಮಗೆ ಅಚ್ಚರಿ ಆಗುತ್ತೆ!

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:   ಕ್ರೆಡಿಟ್ ಕಾರ್ಡ್ ವಂಚನೆ: ಸಾಫ್ಟ್‌ವೇರ್ ಇಂಜಿನಿಯರ್‌ಗೆ ₹53 ಸಾವಿರ ನಷ್ಟ

ಶಿವಮೊಗ್ಗದಲ್ಲಿ ಜಾಗತಿಕ ಶಿಕ್ಷಣ ಮತ್ತು ಉದ್ಯೋಗ ಮೇಳ, ಎಲ್ಲಿ, ಯಾವಾಗ

ಶಿವಮೊಗ್ಗ ನಗರದ ವಿಜಯನಗರದ ನಿವಾಸಿಯಾದ 36 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ ಒಬ್ಬರು ಆನ್​ಲೈನ್​ ವಂಚನೆಗೆ ಒಳಗಾಗಿದ್ದಾರೆ. ಅವರಿಗೆ ಗೊತ್ತಿಲ್ಲದೆ, ಅವರ ಕ್ರೆಡಿಟ್ ಕಾರ್ಟ್​ನಿಂದ ಐವತ್ತು ಸಾವಿರ ರೂಪಾಯಿ ವಂಚಿಸಲಾಗಿದೆ.ಈ ಸಂಬಂಧ  ತುಂಗಾನಗರ ಪೊಲೀಸ್ ಠಾಣೆಯಲ್ಲಿ  ಎಫ್​ಐಆರ್ ಆಗಿದೆ.

SBI Credit Card Fraud of 53K Complaint Filed in Shivamogga, CIBIL Score Affected
SBI Credit Card Fraud of 53K Complaint Filed in Shivamogga, CIBIL Score Affected

ನವೆಂಬರ್ 5, 2025 ರಂದು ನಡೆದ ಘಟನೆ ಸಂಬಂಧ ಇದೀಗ ಎಫ್ಐಆರ್ ದಾಖಲಾಗಿದೆ. ಅಂದು ದಕ್ಷಿಣ ಅಮೆರಿಕದ ಉರುಗ್ವೆ ಎಂಬ ದೇಶದಿಂದ ಸಂತ್ರಸ್ತರ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಆರು ಬಾರಿ ಹಣ ವರ್ಗಾವಣೆ ಮಾಡಿದ್ದಾರೆ.  ಒಟ್ಟು 52,473 ರೂಪಾಯಿ ವರ್ಗಾವಣೆ ಮಾಡಲಾಗಿದೆ. ಮೇಲಾಗಿ ಬ್ಯಾಂಕ್‌ನಿಂದ Cross Currency Charge ಎಂದು 1,280 ರೂಪಾಯಿಗಳನ್ನು ವಿಧಿಸಲಾಗಿದೆ. ವಿಷಯ ಅಂದರೆ, ಘಟನೆ ನಡೆಯುವ ಸಂದರ್ಭದಲ್ಲಿ ದೂರುದಾರರು ಶಿವಮೊಗ್ಗದಲ್ಲೇ ತಂಗಿದ್ದು, ಅವರ ಕ್ರೆಡಿಟ್ ಕಾರ್ಡ್ ಕೂಡ ಅವರ ಬಳಿಯೇ ಇತ್ತು ಮತ್ತದರ ಪಾಸ್​ವರ್ಡ್ ಇತ್ಯಾದಿಗಳನ್ನು ಯಾರಿಗೂ ನೀಡಿರಲಿಲ್ಲ. ಇನ್ನೂ ಆನ್​ಲೈನ್ ವಂಚನೆ ಆಗುತ್ತಲೇ  ಎಸ್‌ಬಿಐಗೆ ಈ ಕುರಿತು ದೂರು ನೀಡಿ,  Dispute ದಾಖಲಿಸಿ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿದ್ದಾರೆ. ಇನ್ನೂ ಪ್ರಕರಣದಲ್ಲಿ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನವರು, ದೂರುದಾರರೇ ‘ಟ್ಯಾಪ್ ಮತ್ತು ಪೇ’ ಮೂಲಕ ಹಣ ಪಾವತಿ ಮಾಡಿದ್ದಾರೆ ಎನ್ನುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ದೂರುದಾರರು ಪೊಲೀಸರ ಮೊರೆ ಹೋಗಿದ್ದಾರೆ.

SBI Credit Card Fraud of 53K Complaint Filed in Shivamogga, CIBIL Score Affected
SBI Credit Card Fraud of 53K Complaint Filed in Shivamogga, CIBIL Score Affected

ಸಾಗರ ಮಾರಿಕಾಂಬಾ ಜಾತ್ರೆಗೆ ಭರದ ಸಿದ್ದತೆ : ಮರ ಕಡಿಯುವ ಶಾಸ್ತ್ರ ಯಾವಾಗ ಗೊತ್ತಾ..?

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಶಿವಮೊಗ್ಗ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಿಂದ 53 ಸಾವಿರ ವಂಚನೆ ಶಿವಮೊಗ್ಗದಲ್ಲಿ ದೂರು ದಾಖಲು SBI Credit Card Fraud of 53K Complaint Filed in Shivamogga, CIBIL Score Affected
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು