Sakrebailu elephant camp ಸಕ್ರೆಬೈಲು ಬಿಡಾರಕ್ಕೆ ಯಾವ್ಯಾವ ವೈದ್ಯರು ಬಂದಿದ್ದಾರೆ
ಶಿವಮೊಗ್ಗದ ಸಕ್ರೆಬೈಲ್ ನಲ್ಲಿರುವ ಬಾಲಣ್ಣ ಸೇರಿದಂತೆ ಇನ್ನಿತರೇ ಆನೆಗಳಿಗೆ ಅನಾರೋಗ್ಯ ಉಂಟಾಗಿರುವ ಬಗ್ಗೆ ತನಿಖೆ ನಡೆಸಲು ಬೆಂಗಳೂರಿನಿಂದ ವೈದ್ಯರ ತಂಡ ಆಗಮಿಸಿದೆ.
ಆ ವೈದ್ಯರ ತಂಡದಲ್ಲಿ ಡಾ ಚಿಟ್ಟಿಯಪ್ಪ ಡಾ. ರಮೇಶ್ ಡಾ. ಆನಂದ್ ಬನ್ನೇರುಘಟ್ಟ ಸೇರಿದಂತೆ ಪ್ರಮುಖ ವೈದ್ಯರು ಭೇಟಿ ನೀಡಿದ್ದು ಆನೆಗಳ ಅರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
ಇದರ ನಡುವೆ ಬಾಲಣ್ಣ ಆನೆ ತನಿಖೆ ವಿಚಾರವಾಗಿ ಸಾವರ್ಜನಿಕರಲ್ಲಿ ಅನೇಕ ಪ್ರಶ್ನೆಗಳು ಎದ್ದಿವೆ. ಬಾಲಣ್ಣ ಆನೆಗೆ ಬಾಲ ಕಿವಿಯಲ್ಲಿ ಗ್ಯಾಂಗ್ರಿನ್ ಸೇರಿದಂತೆ ಇನ್ನಿತರೇ ಆನೆಗಳಿಗೆ ಕೆಲವು ಗಂಭೀರ ಗಾಯಗಳಾಗಿವೆ. ಇದರ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು. ಆನೆಗಳಿಗೆ ಬೇಕಾದ ಸೂಕ್ತ ಚಿಕಿತ್ಸೆಯನ್ನು ನೀಡಲು ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲು ಸೂಚಿಸಿದೆ. ತನಿಖೆಗೆ ಹೂರರಾಜ್ಯದಿಂದ ವೈದ್ಯರ ತಂಡ ರಚಿಸಬೇಕೆಂಬ ಕೂಗು ಎಲ್ಲೆಡೆ ಎದ್ದಿದೆ. ನೇಮಿಸಲು ಆದರೆ ಇದರ ನಡುವೆ ಕೆಲವು ಅಧಿಕಾರಿಗಳು ತರಾತುರಿಯಲ್ಲಿ ಸರ್ಕಾರಿ ನಿಯಮಗಳನ್ನು ಪಾಲಿಸದೆ ಬೆಂಗಳೂರಿನಿಂದ ವೈದ್ಯರನ್ನು ಕರೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಅಧಿಕಾರಿಗಳ ಈ ಆತುರದ ನಿರ್ಧಾರವು ಆನೆಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದೆ ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರಿ ನಿಯಮಾವಳಿ ಮತ್ತು ತಜ್ಞರ ಸಲಹೆ ಪಡೆಯದೆ ತನಿಖೆ ನಢಸುತ್ತಿರುವುದು ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಿಸುವ ಕೆಲಸವಾಗಿದೆ ಎಂದು ಹಲವು ಸಂಘಟನೆಗಳು ಆರೋಪಿಸಿವೆ.
Sakrebailu elephant camp


