ಬಾತ್ರೂಮ್​ಗೆ ಬಂದವರಿಗೆ​ ಸರ್ಪ್ರೈಸ್​ ಕೊಟ್ಟ ಹೆಬ್ಬಾವು, ವಿಡಿಯೋ ನೋಡಿ

ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಹಾವುಗಳು ಮನೆ ಒಳಗೆ ಬಂದು ಸೇರಿಕೊಂಡು ಮನೆಯವರಿಗೆ ಸರ್ಪ್ರೈಸ್​ ಜೊತೆಗೆ ಶಾಕ್​ ನೀಡೋದು ಕಾಮನ್​ ಆಗಿ ಬಿಟ್ಟಿದೆ, ಅದರಲ್ಲೂ ವಿಶೇಷವೆಂದರೆ ಹಳ್ಳಿ ಪ್ರದೇಶಗಳಿಗಿಂತ ಹೆಚ್ಚು ಸಿಟಿ ಪ್ರದೇಶದಲ್ಲಿರುವ ಮನೆಗಳಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.)

SUNCONTROL_FINAL-scaled

ಅದರಂತೆ ಶಿವಮೊಗ್ಗ ಗೋಪಾಳದ ತುಳಸಿ ಬಡಾವಣೆಯ ನಿವಾಸಿ ವಿನಯ್ ಎಂಬುವವರ ಮನೆಯ ಬಾತ್ರೂಮ್​ ಒಳಗೆ ಮಂಗಳವಾರ ರಾತ್ರಿ ಹೆಬ್ಬಾವೊಂದು ಕಾಣಿಸಿಕೊಂಡಿದೆ. ವಿನಯ್​ ಮನೆಯಲ್ಲಿ ಇರುವಾಗ ಬಾತ್ರೂಮ್​ ಒಳಗೆ ಟಬ್​ ಗಳ ಸೌಂಡ್​ ಕೇಳಿಸಿದೆ. ಇದರಿಂದ ಏನಿರಬಹುದು ಎಂದು ಒಳಗೆ ಹೋಗಿ ಪರಿಶೀಲಿಸಿದ ಮನೆಮಾಲೀಕರಿಗೆ ಶಾಕ್​ ಎದುರಾಗಿದೆ, ಏಕೆಂದರೆ ಹೆಬ್ಬಾವು ಬಾತ್ರೂಮ್​ ಒಳಗೆ ಹೋಗಿ ಸೆಲ್ಫ್​ ಮೇಲೆ ಕುಳಿತುಕೊಂಡಿದೆ. 

ಕೂಡಲೇ ಎಚ್ಚೆತ್ತುಕೊಂಡು ವಿನಯ್, ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಿರಣ್ ಹೆಬ್ಬಾವು ರಕ್ಷಣೆ ಮಾಡಿದ್ದಾರೆ. ನಂತರ ಮಾತನಾಡಿದ ಅವರು, ಹಾವುಗಳು ಹೆಚ್ಚಾಗಿ ಹೂವಿನ ಪಾಟ್​ ಹಾಗೂ ಹಾಲ್​ ನಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ವಿಶೇಷವೆಂದರೆ ಈ ಹಾವು 2 ನೇ ಫ್ಲೋರ್​ ಹತ್ತಿ ಬಾತ್ರೂಮ್​​ನಲ್ಲಿ ಕಾಣಿಸಿಕೊಂಡಿದ್ದು ವಿಶೇಷವೆಂದರು.

Python Rescue Snake Found in 2nd Floor Bathroom
Python Rescue Snake Found in 2nd Floor Bathroom

Python Rescue Snake Found in 2nd Floor Bathroom 

shivamogga car decor sun control house
shivamogga car decor sun control house
SUNCONTROL_FINAL-scaled
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು