Power Cable Theft bhadravati : ಭದ್ರಾವತಿ,ಭದ್ರಾವತಿ ತಾಲೂಕಿನ ಚಿಕ್ಕಗೊಪ್ಪನಹಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ಖಾಸಗಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಸುಮಾರು 900 ಮೀಟರ್ ಉದ್ದದ, ಲಕ್ಷಾಂತರ ರೂಪಾಯಿ ಮೌಲ್ಯದ ವಿದ್ಯುತ್ ತಂತಿ ಕಳ್ಳತನವಾಗಿ ಎಂದು ಆರೋಪಿಸಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
Power Cable Theft bhadravati : ಘಟನೆ ವಿವರ:
ದೂರುದಾರರ ಪ್ರಕಾರ, ಭದ್ರಾವತಿ ತಾಲೂಕಿನ ಚಿಕ್ಕಗೊಪ್ಪನಹಳ್ಳಿ ಗ್ರಾಮದಲ್ಲಿ 3 ಮೆಗಾ ವ್ಯಾಟ್ ಸಾಮರ್ಥ್ಯದ ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಖಾಸಗಿ ಕಂಪನಿಯೊಂದು ಸ್ಥಾಪಿಸುತ್ತಿದೆ. ಈ ಕೇಂದ್ರದಿಂದ ಉತ್ಪಾದಿಸಿದ ವಿದ್ಯುತ್ ಅನ್ನು ಭದ್ರಾವತಿ ನಗರದ ಜೆಪಿಎಸ್ ಸಬ್‌ಸ್ಟೇಷನ್‌ಗೆ ಪ್ರಸಾರ ಮಾಡಲು, 33 ಕಿಲೋವ್ಯಾಟ್ ಸಾಮರ್ಥ್ಯದ 3 ಕೇಬಲ್ ವಿದ್ಯುತ್ ತಂತಿಯನ್ನು ಚಿಕ್ಕಗೊಪ್ಪನಹಳ್ಳಿಯಿಂದ ಜೆಪಿಎಸ್ ಸಬ್‌ಸ್ಟೇಷನ್‌ವರೆಗೆ ಕಂಬಗಳ ಮೂಲಕ ಎಳೆಯುವ ಕಾರ್ಯ ಪ್ರಗತಿಯಲ್ಲಿತ್ತು. ಚಿಕ್ಕಗೊಪ್ಪನಹಳ್ಳಿಯಿಂದ ಗೊಂದಿ, ಅರಳಿಕೊಪ್ಪ, ತಾರಿಕಟ್ಟೆ, ಹಳೇ ಹಿರಿಯೂರು, ತಿಮ್ಮಾಪುರ ಗ್ರಾಮದವರೆಗೆ ತಂತಿ ಎಳೆಯುವ ಕೆಲಸ ಮುಗಿದಿತ್ತು.
ಇದರ ನಡುವೆ ಜುಲೈ 12 ರಂದು ಮಧ್ಯಾಹ್ನ ಸುಮಾರು 2:30ಕ್ಕೆ, ದೂರುದಾರರಿಗೆ ಲೈನ್ ಮ್ಯಾನ್ ಕರೆ ಮಾಡಿ, ತಾರಿಕಟ್ಟೆ ಗ್ರಾಮದ ಬಳಿ ಹಾಕಲಾಗಿದ್ದ ವಿದ್ಯುತ್ ತಂತಿ ಕತ್ತರಿಸಲ್ಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಕೂಡಲೇ ಗಾಬರಿಗೊಂಡ ದೂರುದಾರರು ತಾರಿಕಟ್ಟೆ ಗ್ರಾಮಕ್ಕೆ ತೆರಳಿ ಪರಿಶೀಲಿಸಿದಾಗ, ತಾರಿಕಟ್ಟೆ ಗ್ರಾಮದಿಂದ ಅರಳಿಕೊಪ್ಪ ಗ್ರಾಮದ ಮಧ್ಯೆ ಇರುವ 11 ಕಂಬಗಳಿಂದ ಸುಮಾರು 300 ಮೀಟರ್ ಉದ್ದದ 3 ಎಳೆಯ ವಿದ್ಯುತ್ ತಂತಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಕಳುವಾದ ತಂತಿಯ ಒಟ್ಟು ಅಳತೆ 900 ಮೀಟರ್ ಆಗಿದ್ದು, ಇದರ ಅಂದಾಜು ಮೌಲ್ಯ 1 ಲಕ್ಷ 80 ಸಾವಿರ ರೂಪಾಯಿ ಎಂದು ದೂದಾರರು ಆರೋಪಿಸಿದ್ದು, ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
