Nagodi Bus Tipper Collision ನಾಗೋಡಿ ಬಳಿ ಬಸ್-ಟಿಪ್ಪರ್ ಡಿಕ್ಕಿ
ತೀರ್ಥಹಳ್ಳಿ ಹೆದ್ದಾರಿಯಲ್ಲಿ ಸಂಭವಿಸಿದ ಬಸ್ ಅಪಘಾತದ ಘಟನೆ ಬೆನ್ನಲ್ಲೆ ಮತ್ತೊಂದು ಖಾಸಗಿ ಬಸ್ ಅಪಘಾತವಾಗಿದೆ. ಈ ಘಟನೆ ಹೊಸನಗರ ತಾಲ್ಲೂಕಿನಲ್ಲಿ ಸಂಭವಿಸಿದೆ.
ಹೊಸನಗರ (Hosanagara) ತಾಲ್ಲೂಕಿನ ನಿಟ್ಟೂರು-ನಾಗೋಡಿ ಮಾರ್ಗದಲ್ಲಿ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ.
ಹೊಸನಗರದಲ್ಲಿ ನಡೆದಿದ್ದೇನು?Nagodi Bus Tipper Collision
ಖಾಸಗಿ ಬಸ್ ಮತ್ತು ಟಿಪ್ಪರ್ (tipper)ನಡುವೆ ಡಿಕ್ಕಿಯಾಗಿರುವ ಘಟನೆ ಇಲ್ಲಿನ ಶಾಲೆಯೊಂದರ ಬಳಿ ನಡೆದಿದೆ. ಸಾಗರದಿಂದ ಕುಂದಾಪುರದ ಕಡೆಗೆ ಹೊರಟಿದ್ದ ಬಸ್ ಮತ್ತು ನಿಟ್ಟೂರಿನ ಕಡೆಗೆ ಬರುತ್ತಿದ್ದ ರಸ್ತೆ ರೋಲರ್ (road roller) ತುಂಬಿದ ಟಿಪ್ಪರ್ ಮಧ್ಯೆ ಈ ಅಪಘಾತ ಸಂಭವಿಸಿದೆ.
ಬಸ್ಸಿನಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ. ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
road accident news Hosanagara, Nittur-Nagodi road, Sagar to Kundapur bus route, ಹೊಸನಗರ ಸುದ್ದಿ,