missing Persons in Shivamogga /ಈ 3 ವ್ಯಕ್ತಿಗಳು ಕಾಣೆ: ಸುಳಿವು ಸಿಕ್ಕಲ್ಲಿ ಮಾಹಿತಿ ನೀಡಿ 

ajjimane ganesh

missing Persons in Shivamogga District Shivamogga news / ಮೂವರು ವ್ಯಕ್ತಿಗಳು ಕಾಣೆ: ಸುಳಿವು ಸಿಕ್ಕಲ್ಲಿ ಮಾಹಿತಿ ನೀಡಿ 

Shivamogga news / ಶಿವಮೊಗ್ಗ, ಜುಲೈ 02, 2025: ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಿಂದ ಮೂವರು ವ್ಯಕ್ತಿಗಳು ಕಾಣೆಯಾಗಿರುವ ಕುರಿತು ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ. ಇವರ ಸುಳಿವು ಯಾರಿಗಾದರೂ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

- Advertisement -

ಭದ್ರಾವತಿಯಿಂದ ಪ್ರಶಾಂತ ಕಾಣೆ:

ಭದ್ರಾವತಿಯ ಹೊಸಮನೆ ನಿವಾಸಿ, 41 ವರ್ಷ ವಯಸ್ಸಿನ ಪ್ರಶಾಂತ ಎಂಬುವವರು ಏಪ್ರಿಲ್ 07 ರಂದು ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿಯ ಹಣ್ಣಿನ ಅಂಗಡಿಯಿಂದ ಕಾಣೆಯಾಗಿದ್ದಾರೆ. 

ಕಾಣೆಯಾದ ಪ್ರಶಾಂತ ಸುಮಾರು 5.2 ಅಡಿ ಎತ್ತರ, ಗೋಧಿ ಮೈಬಣ್ಣ ಮತ್ತು ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಅವರ ಬಲಗಾಲಿನ ಪಾದದಿಂದ ಸ್ವಲ್ಪ ಮೇಲೆ ಆಪರೇಷನ್ ಗಾಯದ ಗುರುತು ಇದ್ದು, ಕಾಣೆಯಾದ ವೇಳೆ ಹಳದಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ. ಇವರು ಕನ್ನಡ, ಉರ್ದು, ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಸಂಖ್ಯೆ: 08282-274313, 08282 266549, 08282 266252 ಗಳನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ಶಿವಮೊಗ್ಗ ತಾಲ್ಲೂಕಿನ ಅರುಣ್ ಕುಮಾರ್ ನಾಪತ್ತೆ:  missing Persons in Shivamogga /

ಶಿವಮೊಗ್ಗ ತಾಲ್ಲೂಕಿನ ಹಳೆ ಮಡಿಕೆಚೀಲೂರು ಗ್ರಾಮದ ಎ.ಕೆ. ಕಾಲೋನಿ ನಿವಾಸಿ ರತ್ನಮ್ಮ ಬರ್ಮಪ್ಪ ಅವರ ಪುತ್ರ, 29 ವರ್ಷದ ಅರುಣ್ ಕುಮಾರ್ ಎಂಬುವವರು ಮೇ 22 ರಂದು ಮನೆಯಿಂದ ನಗರಕ್ಕೆ ಹೋಗಿ ಬರುವುದಾಗಿ ಹೊರಟವರು ಇದುವರೆಗೂ ವಾಪಸ್ಸಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಅರುಣ್ ಕುಮಾರ್ 5.3 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಮತ್ತು ಸಾಧಾರಣ ಮೈಕಟ್ಟು ಹೊಂದಿದ್ದು, ಅವರ ಎಡಕಾಲು ಮತ್ತು ಎಡಕೈ ಬೆರಳು ಅಂಕವಿಕಲವಾಗಿವೆ ಹಾಗೂ ನೆಲದ ಮೇಲೆ ಬಲಕೈ ಊರಿಕೊಂಡು ತೆವಳುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ತುಂಬುತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಕಾಟನ್ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿ ಬಗ್ಗೆ ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261418 /261400/ 9480803332/ 9480803350 ಗಳಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಕೋರಿದೆ.

Missing Persons in Shivamogga
Missing Persons in Shivamogga

ಭದ್ರಾವತಿಯಿಂದ ಆನಂದ ಕುಮಾರ್ ನಾಪತ್ತೆ: missing Persons in Shivamogga /

ಭದ್ರಾವತಿಯ ಜಿಂಕ್‌ಲೈನ್, ಹೊಸಸಿದ್ದಾಪುರ ನಿವಾಸಿ, 61 ವರ್ಷ ವಯಸ್ಸಿನ ಆನಂದ ಕುಮಾರ್ ಎಂಬುವವರು ಏಪ್ರಿಲ್ 06 ರಂದು ತಮ್ಮ ಮನೆಯಿಂದ ಕಾಣೆಯಾಗಿರುತ್ತಾರೆ. ಕಾಣೆಯಾದ ಆನಂದ ಕುಮಾರ್ ಸುಮಾರು 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ ಮತ್ತು ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಕಾಣೆಯಾದ ವೇಳೆ ಕೆಂಪು-ಬಿಳಿ ಮಿಶ್ರ ಬಣ್ಣದ ಗೆರೆಗಳಿರುವ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಇವರ ಬಲ ಕೆನ್ನೆಯ ಮೇಲೆ ಒಂದು ಕಪ್ಪು ಬಣ್ಣದ ಮಚ್ಚೆ ಇದ್ದು, ಕನ್ನಡ, ತೆಲುಗು, ತಮಿಳು ಭಾಷೆಗಳನ್ನು ಮಾತನಾಡುತ್ತಾರೆ. ಇವರ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಸಂಖ್ಯೆ: 08282-274313, 08282 266549, 08282 266252 ಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

missing person Shivamogga, missing in Bhadravathi, missing Arun Kumar, missing Prashanth, missing Ananda Kumar, Shivamogga police, missing report, Karnataka missing persons, help find missing, Bhadravathi Newtown police, Shivamogga Rural police, missing person appeal

missing Persons in Shivamogga district 02

Share This Article
Leave a Comment

Leave a Reply

Your email address will not be published. Required fields are marked *