lokayukta raid today 24-05-2025 ಲೋಕಾಯುಕ್ತ ರೈಡ್​, ಶಿವಮೊಗ್ಗದಲ್ಲಿ ಏನೇನೆಲ್ಲಾ ಆಯ್ತು, ಎಲ್ಲೆಲ್ಲಿ ಏನೇನು ಸಿಕ್ತು

lokayukta raid today ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಎಲ್ಲೆಡೆ ಲೋಕಾಯುಕ್ತ ಅಧಿಕಾರಿಗಳು ಇಂದು ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದಾರೆ. ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು, ಆನೇಕಲ್, ಗದಗ, ಧಾರವಾಡ ಮತ್ತು ಕಲಬುರಗಿಯಲ್ಲಿ 8 ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ ಮತ್ತು ಆಸ್ತಿ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

lokayukta raid today  ಶಿವಮೊಗ್ಗದಲ್ಲಿ ಕೃಷಿ ವಿವಿ ನಿರ್ದೇಶಕರ ಮನೆ ಮೇಲೆ ದಾಳಿ : ಎಲ್ಲೆಲ್ಲಿ ನಡೆದಿದೆ ದಾಳಿ

ಶಿವಮೊಗ್ಗದ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಸಾವಯವ ಕೃಷಿ ವಿಭಾಗದ ಸಹ ಸಂಶೋಧನಾ ನಿರ್ದೇಶಕ ಎಸ್. ಪ್ರದೀಪ್ ಅವರ ಪ್ರಿಯಾಂಕಾ ಲೇಔಟ್‌ನಲ್ಲಿರುವ ಮನೆ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಹಾಗೆಯೇ, ಶಿಕಾರಿಪುರ ತಾಲ್ಲೂಕಿನ ಭದ್ರಾಪುರದಲ್ಲಿರುವ ನಾಲ್ಕು ಎಕರೆ ವ್ಯಾಪ್ತಿಯಲ್ಲಿರುವ  ತೋಟದ ಮನೆ, ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಕಾಳಶೆಟ್ಟಿ ಕೊಪ್ಪದಲ್ಲಿರುವ 10.5 ಎಕರೆ ವ್ಯಾಪ್ತಿಯ ತೋಟದ ಮನೆ ಹಾಗೂ ಅವರ ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಇನ್ನೂ ಈ ದಾಳಿ ಸಂದರ್ಭದಲ್ಲಿ ಯಾವೆಲ್ಲಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ. 

lokayukta raid today ಪ್ರದೀಪ್ ನಿವಾಸ
lokayukta raid today ಪ್ರದೀಪ್ ನಿವಾಸ

lokayukta raid today ಧಾರವಾಡದಲ್ಲಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಮನೆ ಮೇಲೆ ದಾಳಿ

ಧಾರವಾಡದಲ್ಲಿ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಅಶೋಕ್ ವಾಲ್ಸಂದ್ ಅವರ ರಾಮತೀರ್ಥ ನಗರದ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ, ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರಾಭರಣಗಳು, ಚಿನ್ನಾಭರಣಗಳು, ಒಂದೂವರೆ ಲಕ್ಷ ರೂಪಾಯಿ ನಗದು ಮತ್ತು ಅಕ್ರಮ ಆಸ್ತಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯಮಟ್ಟದ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೆ ದಾಳಿಯ ವೇಳೆ ಲೋಕಾಯುಕ್ತ ಅಧಿಕಾರಿಗಳು ಜಪ್ತಿ ಮಾಡಿದ ಚಿನ್ನಾಭರಣದ ಫೋಟೋಗಳು ಮಾಧ್ಯಮಗಳಿಗೆ ಲಭ್ಯವಾಗಿದೆ. ಉಳಿದಂತೆ ರಾಜ್ಯದ ಇತರ ಕಡೆಗಳಲ್ಲಿಯು ರೇಡ್​ ನಡೆದಿದ್ದು, ಹೆಚ್ಚಿನ ಮಾಹಿತಿ ಸಂಜೆ ಹೊತ್ತಿಗೆ ಸಿಗುವ ಸಾಧ್ಯತೆ ಇದೆ. 

lokayukta raid today ಅಶೋಕ್​ ವಾಲ್ಸಂದ್​ ನಿವಾಸ
lokayukta raid today ಅಶೋಕ್​ ವಾಲ್ಸಂದ್​ ನಿವಾಸ

 

 

 

ಎಲ್ಲೆಲ್ಲಿ ನಡೆದಿದೆ ರೇಡ್

ಪ್ರಕಾಶ್ ಎಇ, ಬಿಬಿಎಂಪಿ, ಗೋವಿಂದರಾಜನಗರ, ಬೆಂಗಳೂರು.

ಲತಾ ಮಣಿ, ಖಾತೆ ಅಧಿಕಾರಿ, ಯೌನ್ ನಗರಪಾಲಿಕೆ, ಚಿಕ್ಕಮಗಳೂರು.

ಕೆ.ಜಿ. ಅಮರನಾಥ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಆನೆಕಲ್.

ಧ್ರುವರಾಜ್, ಪಟ್ಟಣ ಪೊಲೀಸ್ ನಿರೀಕ್ಷಕ, ಗದಗ.

ಮಲ್ಲಿಕಾರ್ಜುನ ಅಲಿಪುರ, ಮಾಜಿ ಎಂಜಿನಿಯರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಲಬುರ್ಗಿ

ರಾಮಚಂದ್ರ, ಪಿಡಿಒ, ಕಲಬುರ್ಗಿ

ಗದಗ ಶಹರ ಠಾಣೆ ಸಿಪಿಐ ಡಿಬಿ ಪಾಟೀಲ್

 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು