ks eshwarappa ಜೂನ್​ 30 : ಸಂವಿಧಾನ ಬದಲಾವಣೆ ವಿವಾದ : ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಈಶ್ವರಪ್ಪ ಬೆಂಬಲ; ಸಿಎಂ ಸಿದ್ದರಾಮಯ್ಯಗೆ 3 ಪ್ರಶ್ನೆ

prathapa thirthahalli
Prathapa thirthahalli - content producer

ks eshwarappa ಶಿವಮೊಗ್ಗ : ಸಂವಿಧಾನದಲ್ಲಿ ‘ಜಾತ್ಯಾತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಸೇರಿಸಿದ ವಿಚಾರವಾಗಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೀಗ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಹೊಸಬಾಳೆ ಅವರ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂರು ನೇರ ಪ್ರಶ್ನೆಗಳನ್ನು ಎಸೆದಿದ್ದಾರೆ.

ks eshwarappa ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ, “ಸಿದ್ದರಾಮಯ್ಯ ಅವರು ಪ್ರತಿದಿನ ಸಂವಿಧಾನದ ಬಗ್ಗೆ ತಿರುಚಿದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ‘ಜಾತ್ಯಾತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಸಂವಿಧಾನಕ್ಕೆ ಯಾವಾಗ ಸೇರಿಸಲಾಯಿತು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ತಮ್ಮ ಸರ್ವಾಧಿಕಾರಿ ನಡೆಯಿಂದ ಸಂವಿಧಾನದ ಮೂಲ ಪೀಠಿಕೆಯನ್ನು ಬದಲಾಯಿಸಿ ಈ ಪದಗಳನ್ನು ತುರುಕಿದ್ದು ಹೌದೋ ಅಲ್ಲವೋ, ಹಾಗೆಯೇ ಅಂಬೇಡ್ಕರ್ ಅವರು ರಚಿಸಿದ ಮೂಲ ಸಂವಿಧಾನದಲ್ಲಿ ಈ ಪದಗಳು ಇದ್ದವೆ ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ  ಈ ಮೂರು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಅವರು ಉತ್ತರ ನೀಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.

- Advertisement -

ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಚರ್ಚೆಯಾಗಬೇಕು. ಕಾಂಗ್ರೆಸ್​ ನಾಯಕರು ಸಂವಿಧಾನ ಜೇಬಲ್ಲೇ ಇದೆ ಎಂದು ಕೂಗಿದರೆ ಸಂವಿಧಾನ ಬದಲಾಗುವುದಿಲ್ಲ. ಆಗ ಇಂದಿರಾ ಗಾಂಧಿ ಪ್ರಜಾಪ್ರಭುತ್ವದ ಕತ್ತು ಹಿಚುಕಿ ಕಗ್ಗೋಲೆ ಮಾಡಿದ್ದರು. ಆಗ ಎಲ್ಲಾ ನಾಯಕರು ಇದನ್ನು ಪ್ರಶ್ನಿಸಿ ಹೋರಾಟ ಮಾಡಿ ಜೈಲಿಗೆ ಹೋಗಿದ್ದರು. ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದು ತಪ್ಪಾ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಆರ್‌ಎಸ್‌ಎಸ್ ಮುಖವಾಡ ಮತ್ತೆ ಕಳಚಿದೆ ಎನ್ನುತ್ತಾರೆ. ದತ್ತಾತ್ರೇಯ ಹೊಸಬಾಳೆ ತುರ್ತು ಪರಿಸ್ಥಿತಿಯಲ್ಲಿ ಈ ಎರಡು ಪದ ಸೇರಿಸಿದ್ದಾರೆ ಎಂದಿದ್ದಾರೆ. ಅವರದ್ದೇ ಪಕ್ಷದವರಾದ  ಜೈರಾಮ್ ರಮೇಶ್ ಸಹ ಇದೇ ಮಾತನ್ನು ಹೇಳಿದ್ದರು. ಆದರೆ ಇದೀಗ ದತ್ತಾತ್ರೇಯ ಹೊಸಬಾಳೆ ಮಾತ್ರವೇ ಈ ಮಾತನ್ನು ಹೇಳಿದ್ದಾರೆ ಎಂದು ಆರ್‌ಎಸ್‌ಎಸ್, ಬಿಜೆಪಿ ಮೇಲೆ ಹಾಕಿ ಸಿದ್ದರಾಮಯ್ಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನದ ಮೂಲ ಪೀಠಿಕೆಯನ್ನು ಬಿಟ್ಟು ಹೋಗಬಾರದು, ಇದು ನನ್ನ ವಾದ. ಜಾತ್ಯಾತೀತ ಮತ್ತು ಸಮಾಜವಾದಿ ಪದವನ್ನು ಸೇರಿಸಿದ್ದು ತಪ್ಪು” ಎಂದು ಈಶ್ವರಪ್ಪ ಹೇಳಿದರು.

ks eshwarappa :  ಆರ್​​ ಎಸ್​ ಎಸ್​ ಹೇಳಿದ್ದನೆಲ್ಲಾ ಬಿಜೆಪಿ ಕೇಳಬೇಕೆಂದಿಲ್ಲ

ಆರ್‌ಎಸ್‌ಎಸ್ ಬೇರೆ, ಬಿಜೆಪಿ ಬೇರೆ ಎಂದು ಸ್ಪಷ್ಟಪಡಿಸಿದ ಈಶ್ವರಪ್ಪ, “ಆರ್‌ಎಸ್‌ಎಸ್ ಹೇಳಿದ್ದನ್ನೆಲ್ಲ ಬಿಜೆಪಿ ಕೇಳಬೇಕು ಎಂದೇನಿಲ್ಲ. ಹಿಂದುತ್ವ ಯಶಸ್ವಿಯಾದರೆ ಹಿಂದೂ ಸಮಾಜದ ಎಲ್ಲಾ ಜಾತಿಗಳು ಯಶಸ್ವಿಯಾಗುತ್ತವೆ. ಎಲ್ಲಾ ಜಾತಿಯವರು ನನಗೆ ಫೋನ್ ಮಾಡುತ್ತಿದ್ದಾರೆ, ಬಿಜೆಪಿ ಸೇರಿ ಎಂದು ಹೇಳುತ್ತಿದ್ದಾರೆ. ನಾನು ಬಿಜೆಪಿಯ ಅನೇಕರ ಬಳಿ ಮಾತನಾಡಬೇಕು, ಆನಂತರ ಬಿಜೆಪಿ ಸೇರುತ್ತೇನೆ. ನಾನು ಬಿಜೆಪಿ ಬಿಟ್ಟ ಯಾವ ಪಕ್ಷಕ್ಕೂ ಹೋಗುವುದಿಲ್ಲ” ಎಂದು ಹೇಳಿದರು.

ks eshwarappa ಇದೇ ವೇಳೆ, ಇತರ ಪಕ್ಷಗಳಿಂದ ತಮ್ಮನ್ನು ಹಾಗೂ ತಮ್ಮ ಮಗನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆಫರ್‌ಗಳು ಬರುತ್ತಿವೆ ಎಂದು ಅವರು ತಿಳಿಸಿದರು. ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ಕ್ರಾಂತಿ ಬಗ್ಗೆಯೂ ಮಾತನಾಡಿದ ಈಶ್ವರಪ್ಪ, “ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಇಳಿತಾರೋ ಹೋಗ್ತಾರೋ ಎನ್ನುವ ಚರ್ಚೆಗೆ ಕ್ರಾಂತಿ ಎಂದು ಹೆಸರು ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಬಾಗಿಲು ಒದ್ದು ಒಳಗೆ ಬರುತ್ತಾರೋ ಗೊತ್ತಿಲ್ಲ. ರಾಜಣ್ಣ ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ ಅಂದಿದ್ದಾರೆ. ಕಾದು ನೋಡೋಣ ಏನೇನು ಆಗುತ್ತೆ” ಎಂದು ಮಾರ್ಮಿಕವಾಗಿ ಹೇಳಿದರು.

 

Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Comment

Leave a Reply

Your email address will not be published. Required fields are marked *