flying lizard / ಶಿಕಾರಿಪುರದದಲ್ಲಿ ಕಂಡ ಕರ್ವಾಲೋ ಕಥೆಯ ಅಪರೂಪದ ಜೀವಿ! ನೆನಪಾದರು ತೇಜಸ್ವಿ

ajjimane ganesh

 flying lizard  ಮಲೆನಾಡುಟುಡೆ ಸುದ್ದಿ ಶಿಕಾರಿಪುರ : ಸಾಮಾನ್ಯವಾಗಿ ಅಪರೂಪಕ್ಕೆ ಕಾಣಸಿಗುವ. ಅಳಿವಿನಂಚಿನಲ್ಲಿರುವ ಅಪರೂಪದ ‘ಹಾರುವ ಓತಿ’ ಭಾನುವಾರ ಬೆಳಗ್ಗೆ ಹಾರೋಹಿತ್ತಲು ಗ್ರಾಮದಲ್ಲಿ ಪ್ರತ್ಯಕ್ಷವಾಗಿತ್ತು. ಇಲ್ಲಿನ ಶಿಕ್ಷಕ ಮಾಲತೇಶ್ ಅವರ ಮನೆಯ ಸಮೀಪ ಕಾಣಿಸಿಕೊಂಡ ಈ ಓತಿ. ಕೆಲಕಾಲ ಮಕ್ಕಳು ಮತ್ತು ಹಿರಿಯರಿಗೆ ಕುತೂಹಲದ ಕೇಂದ್ರಬಿಂದುವಾಗಿತ್ತು.  

flying lizard

ಜನರ ಸದ್ದುಗದ್ದಲ ಹೆಚ್ಚಾಗುತ್ತಿದ್ದಂತೆ, ಅದು ತನ್ನ ವಾಸಸ್ಥಾನವಾದ ಕಾಡಿನೊಳಗೆ ಮರಳಿ ಸೇರಿಕೊಂಡಿತು. ವಿಶಿಷ್ಟ ರಚನೆ ಮತ್ತು ಅಳಿವಿನಂಚಿನಲ್ಲಿರುವ ಸಂತತಿ ಈ ಹಾರುವ ಓತಿಯು ಸಾಮಾನ್ಯ ಓತಿಕ್ಯಾತದಂತೆ ಕಂಡರೂ, ಇದರ ದೇಹದ ಮೇಲೆ ರೆಕ್ಕೆಯಾಕಾರದ ವಿಶಿಷ್ಟ ರಚನೆಯನ್ನು ಹೊಂದಿದೆ. ಇದೇ ರಚನೆಯಿಂದಾಗಿ ಇದು ಮರದಿಂದ ಮರಕ್ಕೆ ಹಾರುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

- Advertisement -

ಪಶ್ಚಿಮಘಟ್ಟ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಈ ಓತಿಯ ಸಂತತಿಯು ಕಾಲಕ್ರಮೇಣ ಕ್ಷೀಣಿಸಿದ್ದು, ಪ್ರಸ್ತುತ ಇದು ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಗೆ ಸೇರಿಕೊಂಡಿದೆ. ಸಾಹಿತ್ಯ ಲೋಕದಲ್ಲಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಾದಂಬರಿ ‘ಕರ್ವಾಲೋ’ ದಲ್ಲಿ ಹಾರುವ ಓತಿಯ ಬಗ್ಗೆ ಸಮಗ್ರ ಮತ್ತು ಆಕರ್ಷಕ ವಿವರಣೆಯಿದ್ದು, ಅದರ ಮೂಲಕ ಈ ಜೀವಿ ಮತ್ತಷ್ಟು ಪ್ರಖ್ಯಾತಿ ಗಳಿಸಿದೆ.

K.P. Poornachandra Tejaswi’s novel Karvalo (ಕರ್ವಾಲೊ) features a flying lizard (Draco dussumieri)

Share This Article
Leave a Comment

Leave a Reply

Your email address will not be published. Required fields are marked *