davangere city bandh / 25 ಕ್ಕೆ ಬಾಡಾ ಹೆದ್ದಾರಿ ಬಂದ್, 28 ಕ್ಕೆ ದಾವಣಗೆರೆ ನಗರ ಬಂದ್/ ಶಿವಮೊಗ್ಗದಲ್ಲಿ ರೇಣುಕಾಚಾರ್ಯ!

ajjimane ganesh

ಶಿವಮೊಗ್ಗ: ಒಡೆದ ಭದ್ರಾ ನಾಲೆ, ವಿವಾದ ತಾರಕಕ್ಕೆ – ದಾವಣಗೆರೆ ನಗರ ಬಂದ್‌ಗೆ ರೇಣುಕಾಚಾರ್ಯ ಕರೆ  /Shivamogga: Bhadra right canal controversy erupts – Renukacharya calls for Davangere city bandh

ಶಿವಮೊಗ್ಗ, ಜೂನ್ 24, 2025 (ಮಲೆನಾಡು ಟುಡೆ ಸುದ್ದಿ ಸಂಸ್ಥೆ): ಭದ್ರಾ ಬಲದಂಡೆ ಕಾಲುವೆ ಒಡೆದಿರುವ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ನಿನ್ನೆದಿನ ದಾವಣಗೆರೆಯ ರೈತರು ಮಾಜಿ ಸಚಿವ ರೇಣುಕಾಚಾರ್ಯರ ನೇತೃತ್ವದಲ್ಲಿ ಭದ್ರಾ ಡ್ಯಾಮ್​ಗೆ ಮುತ್ತಿಗೆ ಹಾಕಿತ್ತು. ಅವರನ್ನು ತಡೆದ ಪೊಲೀಸರು ಆನಂತರ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕೆಲಹೊತ್ತಿನ ನಂತರ ಬಿಡುಗಡೆ ಮಾಡಿದ್ದರು.

- Advertisement -
/Shivamogga: Bhadra right canal controversy erupts – Renukacharya calls for Davangere city bandh
/Shivamogga: Bhadra right canal controversy erupts – Renukacharya calls for Davangere city bandh

davangere city bandh

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು, ಇಲ್ಲವಾದಲ್ಲಿ ಜೂನ್ 28ರಂದು ದಾವಣಗೆರೆ ನಗರ ಬಂದ್‌ ನಡೆಸುವುದಾಗಿ ಹೇಳಿದ್ದಾರೆ. ಬಲದಂಡೆ ನಾಲೆಯಲ್ಲಿ ಕಾಮಗಾರಿ ನಡೆಸುತ್ತಿರುವುದು ಈ ಭಾಗದ ರೈತರಿಗೆ ಭಾರಿ ಸಮಸ್ಯೆಯಾಗಲಿದೆ.

ಆದ್ದರಿಂದ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದ ಅವರು,  ದಾವಣಗೆರೆಯ ಬಾಡಾ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. ಅಲ್ಲದೆ ಇದೇ ಶನಿವಾರ ಶನಿವಾರ (ಜೂನ್ 28) ದಾವಣಗೆರೆ ನಗರ ಬಂದ್ ನಡೆಸಲಾಗುವುದು ಎಂದರು. ವರ್ತಕರು ಮತ್ತು ರೈತರು ಈ ಹೋರಾಟಕ್ಕೆ ಸಹಕಾರ ನೀಡಬೇಕು, ಕೈ ಜೋಡಿಸಬೇಕು ಎಂದು ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *