Bike Wheeling : ಅಪ್ರಾಪ್ತ ಬಾಲಕನ ವೀಲ್ಹಿಂಗ್: ತಂದೆ ಮೇಲೆ ಕೇಸ್, ಬೈಕ್ ಸೀಜ್
ಚಿಕ್ಕಮಗಳೂರು: ನಗರದಲ್ಲಿ ಅಪ್ರಾಪ್ತ ಬಾಲಕನೊಬ್ಬ ವೀಲ್ಹಿಂಗ್ ಮಾಡಿದ ಘಟನೆಗೆ ಸಂಬಂಧಿಸಿದಂತೆ, ಆತನ ತಂದೆಯ ಮೇಲೆ ಪ್ರಕರಣ ದಾಖಲಿಸಿ, ಬೈಕ್ ವಶಪಡಿಸಿಕೊಂಡು, ಆರ್‌ಸಿ ಬುಕ್ ರದ್ದುಪಡಿಸುವ ಮೂಲಕ ಪೊಲೀಸರು ವೀಲಿಂಗ್ ಪುಂಡರಿಗೆ ಶಾಕ್ ನೀಡಿದ್ದಾರೆ.
ಸೋಮವಾರ ಸಂಜೆ ನಗರದ ಫಾರೆಸ್ಟ್ ಗೇಟ್ ಬಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕಚೇರಿಗಳ ಸಮೀಪದಲ್ಲೇ ಬಾಲಕನೊಬ್ಬ ದ್ವಿಚಕ್ರ ವಾಹನದಲ್ಲಿ ವೀಲ್ಹಿಂಗ್ ಮಾಡಿದ್ದ. ಈ ವೀಲ್ಹಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.
ವೀಲ್ಹಿಂಗ್ ಮಾಡಿದ ಬಾಲಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ದ್ವಿಚಕ್ರ ವಾಹನದ ಆರ್.ಸಿ. ಮಾಲೀಕರಾಗಿರುವ ಆತನ ತಂದೆಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ, ಬೈಕಿನ ಹಿಂಬದಿ ಸವಾರನ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚಿಕ್ಕಮಗಳೂರು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಬೈಕ್ ಅನ್ನು ಸೀಜ್ ಮಾಡಲಾಗಿದ್ದು, ಆರ್.ಸಿ. ಬುಕ್ ರದ್ದುಪಡಿಸುವ ಪ್ರಕ್ರಿಯೆಯೂ ನಡೆದಿದೆ.
Bike Wheeling ವೀಲಿಂಗ್ ಮಾಡುತ್ತಿರುವ ಯುವಕ