agriculture news 02/ ರೈತರಿಗೆ ಕೃಷಿ ಇಲಾಖೆಯಿಂದ ಮಹತ್ವದ ಸುದ್ದಿ : ತಕ್ಷಣವೇ ಈ ಕೆಲಸ ಮಾಡಿ

ajjimane ganesh

 agriculture news Karnataka ರೈತರಿಗೆ ಸಹಾಯಕ ಕೃಷಿ ನಿರ್ದೇಶಕರಿಂದ ಮಹತ್ವದ ಕರೆ!

  Krashi news / ಶಿವಮೊಗ್ಗ, ಜುಲೈ 02, 2025: ಶಿವಮೊಗ್ಗ ಜಿಲ್ಲಾದ್ಯಂತ ಈ ವರ್ಷ ಮುಂಗಾರು ಹಂಗಾಮು ಭರವಸೆಯಾಯಕವಾಗಿ ಆರಂಭಗೊಂಡಿದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ, ಇಲ್ಲಿವರೆಗೂ ವಾಡಿಕೆಗಿಂತ ಶೇಕಡಾ 83 ರಷ್ಟು ಅಧಿಕ ಮಳೆಯಾಗಿದೆ..

ಇನ್ನೂ ಈಗಾಗಲೇ  ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದು, ಈ ನಿಟ್ಟಿನಲ್ಲಿ ಫಸಲ್ ಬೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ರೈತರಿಗೆ ಮನವಿ ಮಾಡಿದ್ದಾರೆ.

- Advertisement -

ಮುಂಗಾರು ಹಂಗಾಮು ಉತ್ತಮವಾಗಿರುತ್ತದೆ ಎಂದು ಹವಾಮಾನ ವರದಿಗಳು ಹೇಳುತ್ತಿದ್ದರೂ, ಮಳೆಯು ಕೆಲವೊಮ್ಮೆ ರೈತರೊಂದಿಗೆ ಜೂಜಾಟವಾಡುತ್ತದೆ. ಬೆಳವಣಿಗೆ ಹಂತದಲ್ಲಿ ಮಳೆ ಕೈಕೊಡುವುದು ಅಥವಾ ಕೊಯ್ಲಿನ ಸಮಯದಲ್ಲಿ ಅತಿಯಾದ ಮಳೆಯಾಗುವುದು ಸಾಮಾನ್ಯ. ಇದರಿಂದ ರೈತರು ಇಳುವರಿ ಕಡಿಮೆಯಾಗಿ ಆರ್ಥಿಕ ನಷ್ಟ ಅನುಭವಿಸಬಹುದು. ಈ ಹಿನ್ನೆಲೆಯಲ್ಲಿ, ರೈತರು ಕಡ್ಡಾಯವಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವುದು ಒಳ್ಳೆಯದು. 

agriculture news Karnataka
agriculture news Karnataka

ಈ ನಿಟ್ಟಿನಲ್ಲಿ ರೈತರು ಕೇವಲ ಶೇಕಡಾ 2 ರಷ್ಟು ವಿಮಾ ಕಂತು ಪಾವತಿಸಿ ಈ ಯೋಜನೆಯ ಲಾಭ ಪಡೆಯಬಹುದು. ಈ  ನಿಟ್ಟಿನಲ್ಲಿ ವಿಮಾ ಕಂತು ಪಾವತಿಸಲು  (ಮುಸುಕಿನಜೋಳ ಬೆಳೆಗೆ) ಜುಲೈ 31, 2025, (ಭತ್ತದ ಬೆಳೆಗೆ) ಆಗಸ್ಟ್ 16, 2025 ಕೊನೆಯ ದಿನಾಂಕವಾಗಿದೆ. 

ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳು, ಕರ್ನಾಟಕ-ಓನ್, ಗ್ರಾಮ-ಓನ್ ಕೇಂದ್ರಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆ ವಿಮೆಯನ್ನು ಕಟ್ಟಬಹುದಾಗಿದೆ.

agriculture news Karnataka

ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಕೆ ಕಡ್ಡಾಯ: ರೈತರು ತಾವು ಬೆಳೆದ ಬೆಳೆಗಳನ್ನು ‘ಮುಂಗಾರು ರೈತರ ಬೆಳೆ ಸಮೀಕ್ಷೆ-2025′ (Farmer Crop Survey App-2025) ಮೊಬೈಲ್ ಆ್ಯಪ್ ಮುಖಾಂತರ ತಾವೇ ಸಮೀಕ್ಷೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. 

ಬೆಳೆ ಪರಿಹಾರ, ಬೆಳೆ ವಿಮೆ, ಬೆಳೆ ಸಾಲ, ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಕ್ಕೆ ಫಸಲನ್ನು ನೀಡಲು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ದತ್ತಾಂಶ ಪರಿಶೀಲನೆ ಕಡ್ಡಾಯವಾಗಿದೆ. ಈ ಆಪ್​ನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಈ ವಿಚಾರದ ಬಗ್ಗೆ ಮಾತನಾಡಿರುವ  ಸಹಾಯಕ ಕೃಷಿ ನಿರ್ದೇಶಕರಾದ ರಮೇಶ್ ಎಸ್.ಟಿ. ನಿಗದಿತ ದಿನಾಂಕದೊಳಗೆ ನೋಂದಾಯಿಸಿಕೊಳ್ಳಿ ಮತ್ತು ತಮ್ಮ ಬೆಳೆಯನ್ನು ಸ್ವತಃ ತಾವೇ ಮುಂಗಾರು ರೈತರ ಬೆಳೆ ಸಮೀಕ್ಷೆ-2025 ಆ್ಯಪ್‌ನಲ್ಲಿ ಸಮೀಕ್ಷೆ ಮಾಡಿಕೊಳ್ಳಿ ಎಂದು ಕರೆ ನೀಡಿದ್ದಾರೆ.

agriculture news Karnataka , Shivamogga monsoon, crop insurance, PM Fasal Bima Yojana, crop survey app, farmer assistance, agriculture news Karnataka, Shivamogga rainfall, maize sowing, paddy cultivation, fertilizer stock, seed availability, agricultural director, farmer safety, natural disaster protection, crop loss compensation, monsoon season, Karnataka agriculture, Farmer Crop Survey App 2025, crop insurance deadline, Shivamogga farmers.

Share This Article
Leave a Comment

Leave a Reply

Your email address will not be published. Required fields are marked *