ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಉದ್ಭವ ಬಸವೇಶ್ವರ ಸ್ವಾಮಿ ರಥೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ವೃತ ಕಾರ್ಯಕ್ರಮ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 24, 2025

ಶಿವಮೊಗ್ಗ|  ತಾಲೂಕಿನ ಪುರದಾಳು ಗ್ರಾಮದ ಶ್ರೀ ಉದ್ಭವ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಉದ್ಭವ ಬಸವೇಶ್ವರ ಸ್ವಾಮಿ ರಥೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ವೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

- Advertisement -

Malenadu Today

 

ಫೆ.25 ರಂದು ರಾತ್ರಿ 7.30 ಗಂಟೆಗೆ ದೇವಸ್ಥಾನದಲ್ಲಿ ಗಣಹೋಮ ನಡೆಯಲಿದೆ. ಹಾಗೂ ಫೆ.26 ರಂದು  ಸಂಜೆ 6.30 ಗಂಟೆಗೆ ಶ್ರೀ ಉದ್ಭವ ಬಸವೇಶ್ವರ ಸ್ವಾಮಿ ರಥೋತ್ಸವ ನೇರವೇರಲಿದೆ.

ಪುರದಾಳು ಗ್ರಾಮದ ಗೌಳಿಗರ ತಂಡ ಹಾಗೂ ಅಗಸವಳ್ಳಿ ತಂಡದಿಂದ ಆಕರ್ಷಕ ಡೊಳ್ಳು ಕುಣಿತ ಹಾಗೂ ಶ್ರೀ ವೀರಭದ್ರೇಶ್ವರ ಕಲಾ ತಂಡದಿಂದ ಆಕರ್ಷಕ ವೀರಗಾಸೆ ನಡೆಯಲಿದೆ.

ಅದೇ ದಿನ ರಾತ್ರಿ 9.30 ಗಂಟೆಗೆ ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಾಲಾಡಿ ದಕ್ಷಿಣ ಕನ್ನಡ ಇವರಿಂದ ” ಹಂಸ ಪಲ್ಲಕ್ಕಿ ” ಎಂಬ ಯಕ್ಷಗಾನ ಪ್ರಸಂಗ ನಡೆಯಲಿದೆ.

ಫೆ.27 ರಂದು ಬೆಳಿಗ್ಗೆ10.30 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ನಂತರ ಮಹಾ ಮಂಗಳಾರತಿ,ಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ 1.30 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಈ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ಉದ್ಭವ ಬಸವೇಶ್ವರ ಜೀರ್ಣೋದ್ಧಾರ ಸೇವಾ ಸಮಿತಿಯವರು ಮನವಿ ಮಾಡಿದ್ದಾರೆ.

Malenadu Today

SUMMARY | Sri Udbhava Basaveshwara Swamy Rathotsava and Mass Satyanarayana Vrata programme will be held at Sri Udbhava Basaveshwara Temple in Puradalu village of the taluk on the occasion of Mahashivaratri.

KEYWORDS | Sri Udbhava Basaveshwara, Temple, Puradalu village, Mahashivaratri, shivamogga,

Share This Article