ಶಿವಮೊಗ್ಗದಲ್ಲಿ ಮತ್ತೆ ಮಳೆ ಶುರುವಾಗಿದೆ…ಬೆಳಗ್ಗೆಯಷ್ಟೆ ಆತಂಕ ಹುಟ್ಟಿಸಿದ್ದ ಮಳೆ ಮತ್ತೆ ಸಂಜೆ ಆಗುತ್ತಲೇ ಆರಂಭವಾಗಿದೆ..
ಮಳೆಯ ಆರ್ಭಟ ಹೇಗಿದೆ ಅಂದರೆ ನಿನ್ನೆ ರಾತ್ರಿಯಿಡಿ ಸುರಿದ ಮಳೆಗಿಂತಲೂ ಜೋರಿದೆ…ನಗರ ಪ್ರದೇಶಕ್ಕಿಂತಲೂ ಕಾಡು ಪ್ರದೇಶಗಳಲ್ಲಿ ಸಿಡಿಲು ಅಬ್ಬರಿಸುತ್ತಿದೆ…ಗುಡುಗಿನ ಶಬ್ಧ ಎದೆ ನಡುಗಿಸ್ತಿದೆ..
ಸಿಟಿ ಭಾಗವೂ ಸೇರಿದಂತೆ ಹಲೆವೆಡೆ ದೋ ಎನ್ನುವಂತೆ ಮಳೆಯಾಗುತ್ತಿದೆ..ಎಲ್ಲಾ ಲೆಕ್ಕಾಚಾರ ಮೀರಿದ ರೀತಿಯಲ್ಲಿ ಮಳೆ ಸುರಿಯುತ್ತಿದ್ದು, ಮತ್ತೆ ಮಳೆ ನೀರು ಮನೆಗಳಿಗೆ ನುಗ್ಗುವ ಆತಂಕ ಎದುರಾಗಿದೆ..

ಇವತ್ತು ಬೆಳಗ್ಗೆ ನಂತರ ಬಿಸಿಲು ಬಿದ್ದು ಮಳೆ ನೀರು ಇಳಿದಿತ್ತು. ಇದೀಗ ಮಳೆಯಾಗುತ್ತಿದ್ದು ಮಳೆ ಅಬ್ಬರ ಅಚ್ಚರಿ ಜೊತೆಗೆ ಆತಂಕ ಮೂಡಿಸ್ತಿದೆ