Raghaveshwar Sri/ ಆತ್ಮಹತ್ಯೆಗೆ ಪ್ರಚೋದನೆ ಕೇಸ್​ನಲ್ಲಿ ರಾಘವೇಶ್ವರ ಶ್ರೀ , ಕಲ್ಲಡ್ಕ ಪ್ರಭಾಕರ್​ ಭಟ್​ಗೆ ಬಿಗ್​ ರಿಲೀಫ್

ಹಂಚಿಕೊಳ್ಳಿ
WhatsApp Facebook X Telegram
image_750x500_6441f18a529ba

ಶಿವಮೊಗ್ಗ ನ್ಯೂಸ್​/ SHIVAMOGGA NEWS/ Malenadu today/ Apr 20, 2023/ KARNATAKA ONLINE NEWS / GOOGLE NEWS


ಶಿವಮೊಗ್ಗ/  , 2014, ಆಗಸ್ಟ್ 31ರಂದು ನಡೆದಿದ್ದ ಆತ್ಮಹತ್ಯೆ ಪ್ರಕರಣವೊಂದರಲ್ಲಿ ಸಲ್ಲಿಸಲಾಗಿದ್ದ ಆರೋಪ ಪಟ್ಟಿಯನ್ನು ವಜಾಗೊಳಿಸುವಂತೆ ಕೋರಿದ್ದ ಅರ್ಜಿಯೊಂದನ್ನ ಹೈಕೋರ್ಟ್​ ಮಾನ್ಯಮಾಡಿದ್ದು ಆರೋಪಪಟ್ಟಿಯನ್ನು ವಜಾಗೊಳಿಸಿದೆ.  ಇದರಿಂದಾಗಿ ರಾಘವೇಶ್ವರ ಸ್ವಾಮೀಜಿ ((Raghaveshwara Bharathi Sri) )ಹಾಗೂ ಕಲ್ಲಡ್ಕ ಪ್ರಭಾಕರ್​ ಭಟ್  ನಿರಾಳಾಗಿದ್ದಾರೆ. 

ಏನಿದು ಪ್ರಕರಣ?

ರಾಮಕಥಾ ಗಾಯಕಿಯೊರ್ವರ ಮೇಲಿನ ಅತ್ಯಾಚಾರದ  ಆರೋಪ ಕೇಸ್​ನಲ್ಲಿ, ಸಂತ್ರಸ್ತೆಯ ಪತಿಯ ಸಹೋದರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದರು. ಸದ್ಯ ಈ ಆರೋಪ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿದೆ.

ವಿವರ!

ಪ್ರಕರಣದಲ್ಲಿ ಸಂತ್ರಸ್ತೆಯ  ಪತಿ ದಿವಾಕರ ಶಾಸ್ತ್ರಿ ಅವರ ಸಹೋದರ ಶ್ಯಾಮ್‌ ಪ್ರಸಾದ್ ಶಾಸ್ತ್ರಿ ( (Syama Prasad Shastri Suicide Case) )ಪುತ್ತೂರಿನ ಕೆದಿಲ ಗ್ರಾಮದಲ್ಲಿ 2014, ಸೆಪ್ಟೆಂಬರ್ 1 ರಂದು,  ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದರು. 

ಇವರ ಆತ್ಮಹತ್ಯೆಗೆ ರಾಘವೇಶ್ವರ ಸ್ವಾಮೀಜಿ ಹಾಗೂ ಕಲ್ಲಡ್ಕ ಪ್ರಭಾಕರ್​ ಭಟ್ ಕಡೆಯಿಂದ ಬಂದ ಒತ್ತಡವೇ ಕಾರಣ ಎನ್ನಲಾಗಿತ್ತು.  ರಾಘವೇಶ್ವರ ಸ್ವಾಮೀಜಿ ವಿರುದ್ಧದ ಆರೋಪವನ್ನು ಹಿಂಪಡೆಯುವಂತೆ ಸಂತ್ರಸ್ತೆಗೆ ಒತ್ತಡ ಹೇರಬೇಕು ಹಾಗೂ ಸಂತ್ರಸ್ತೆಯ ವಿರುದ್ಧವಾಗಿ ಸಾಕ್ಷ್ಯ ಹೇಳಬೇಕು ಎಂದು ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿತ್ತು.

 

ಇದೇ ಕಾರಣಕ್ಕೆ ಶಾಸ್ತ್ರಿಯವರು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎಂದು ಶಾಸ್ತ್ರಿಯವರ ಪತ್ನಿ ಸಂಧ್ಯಾಲಕ್ಷ್ಮೀ  ಕಲ್ಲಡ್ಕ ಪ್ರಭಾಕರ ಭಟ್‌ ಮತ್ತಿತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.  ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪುತ್ತೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. 

ಆರೋಪ ಪಟ್ಟಿ ವಜಾಕ್ಕೆ ಅರ್ಜಿ

ಇನ್ನೂ ಪುತ್ತೂರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಈ ಆರೋಪ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ರಾಘವೇಶ್ವರ ಸ್ವಾಮೀಜಿ ಮತ್ತು ಕಲ್ಲಡ್ಕ ಪ್ರಭಾಕರ ಭಟ್‌ ಹೈಕೋರ್ಟ್​ಗೆ   ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ರು. ಇದರ ವಿಚಾರಣೆ ನಡೆದು  ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

MUST READ /

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,  #Kannada_News,  #karnatakaassemblyelection2023,  #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda,

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor