ಸಂಗಪ್ಪನಿಂದ ಸಮಸ್ಯೆಯಿಲ್ಲ, ಹಣ ನುಂಗಪ್ಪನಿಂದಲೇ ತೊಂದರೆ ಕೋಟಾ ಶ್ರೀನಿವಾಸ್​ ಪೂಜಾರಿ ಹೀಗಂದಿದ್ಯಾಕೆ

ಶಿವಮೊಗ್ಗ: ಕೇಂದ್ರ ಸರ್ಕಾರದ ನೂತನ ವಿಬಿ ಜಿ-ರಾಮ್ ಜಿ ಯೋಜನೆ ಕುರಿತು ಕಾಂಗ್ರೆಸ್‌ ಜಾಹೀರಾತಿನ ಮೂಲಕ ನಡೆಸುತ್ತಿರುವ ಪ್ರಚಾರಕ್ಕೆ ಉಡುಪಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು ನೀಡಿದ್ದಾರೆ. ಪತ್ರಿಕೆಯ ಜಾಹೀರಾತಿನಲ್ಲಿ ಸಂಗಪ್ಪಣ್ಣನ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಆದರೆ ದೇಶಕ್ಕೆ ಮತ್ತು ಬಡವರಿಗೆ ಸಂಗಪ್ಪನಿಂದ ಸಮಸ್ಯೆಯಾಗಿಲ್ಲ, ಯೋಜನೆಯ ಹಣ ನುಂಗುವ ನುಂಗಪ್ಪಣ್ಣ ನಿಂದ ತೊಂದರೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

SUNCONTROL_FINAL-scaled

ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆಗೆ ಸಿದ್ಧತೆ, ಅಮ್ಮನವರ ವಿಸರ್ಜನಾ ಮೂರ್ತಿ ಕೆತ್ತನೆ ಕಾರ್ಯಕ್ಕೆ ಚಾಲನೆ

 ಈ ವೇಖೆ  ನರೇಗಾ ಯೋಜನೆಯಲ್ಲಿ ನಡೆದಿದೆ ಎನ್ನಲಾದ  ಬೃಹತ್ ಹಗರಣಗಳನ್ನು ಪ್ರಸ್ತಾಪಿಸಿದ ಅವರು, ಉದ್ಯೋಗ ಖಾತ್ರಿಯಲ್ಲಿ ಸುಮಾರು 22 ಸಾವಿರ ಕೋಟಿ ರೂಪಾಯಿಯಷ್ಟು ಭ್ರಷ್ಟಾಚಾರ ನಡೆದಿದೆ. ಯಂತ್ರಗಳ ಮೂಲಕ ಕೆಲಸ ಮಾಡಿಸಿ, ಬಡವರ ಹಣವನ್ನು ಮಧ್ಯವರ್ತಿಗಳೇ ನುಂಗುತ್ತಿದ್ದರು. ಈ ನುಂಗಣ್ಣಗಳ ಹಾವಳಿ ತಡೆದು, ಪಾರದರ್ಶಕತೆ ತರಲೆಂದೇ ಕೇಂದ್ರ ಸರ್ಕಾರ ವಿಬಿ ಗ್ರಾಮ್-ಜಿ’ ಜಾರಿಗೆ ತಂದಿದೆ. ಇದು ಬಡವರಿಗಲ್ಲ, ಭ್ರಷ್ಟರಿಗೆ ಮಾತ್ರ ನೀಡುತ್ತಿರುವ ಬಿಸಿ ಎಂದು ಗುಡುಗಿದ್ದಾರೆ. 

ಮಹಾತ್ಮ ಗಾಂಧಿಯವರ ಹೆಸರು ಕೈಬಿಟ್ಟಿರುವ ಕುರಿತಾದ ಕಾಂಗ್ರೆಸ್ ಆಕ್ರೋಶಕ್ಕೆ ಉತ್ತರಿಸಿದ ಪೂಜಾರಿ, ಈ ಹಿಂದೆ ನಾವು ಜಾರಿಗೆ ತಂದಿದ್ದ ಸಪ್ತಪದಿ ಯೋಜನೆಯನ್ನು ಈ ಸರ್ಕಾರ ಮಾಂಗಲ್ಯ ಭಾಗ್ಯ ಎಂದು ಬದಲಿಸಿಲ್ಲವೇ? ಆಗ ನಾವು ಆಕ್ಷೇಪ ಮಾಡಿರಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಯೋಜನೆಗೆ ಕರ್ಮಶ್ರೀ ಎಂದು ಹೆಸರಿಟ್ಟಾಗ ಇವರು ಯಾಕೆ ಪ್ರಶ್ನಿಸಲಿಲ್ಲ? ಈಗ ಮೋದಿ ಸರ್ಕಾರವನ್ನು ದೂರಲು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. 

 ಇದೇ ವೇಳೆ ಸದನದಲ್ಲಿ ರಾಜ್ಯಪಾಲರ ವಿರುದ್ಧ ನಡೆದ ಘಟನೆಯನ್ನು ಖಂಡಿಸಿದ ಅವರು, ರಾಜ್ಯಪಾಲರನ್ನು ಅಡ್ಡಹಾಕಿ ದೌರ್ಜನ್ಯ ಮಾಡುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಕಾಂಗ್ರೆಸ್ ಸರ್ಕಾರ ಭಾಷೆಯ ಬದಲು ದೌರ್ಜನ್ಯದ ಮೂಲಕ ಮಾತನಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Kota Srinivas Poojary Slams Congress

Kota Srinivas Poojary Slams Congress
Kota Srinivas Poojary Slams Congress
shivamogga car decor sun control house
shivamogga car decor sun control house
SUNCONTROL_FINAL-scaled
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು