ಶಿವಮೊಗ್ಗ: ಜಿಲ್ಲೆಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಷ್ಕಾಮ ಸೇವೆಯ ಅಡಿಯಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಮಾಜ ಸೇವೆಯೊಂದಿಗೆ ಶಿಸ್ತಿನ ಬದುಕು ರೂಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ.

ಅರ್ಹತೆಗಳೇನಿರಬೇಕು
ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು ಮತ್ತು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿ 19 ರಿಂದ 45 ವರ್ಷದೊಳಗಿರಬೇಕು. ದೈಹಿಕವಾಗಿ ಮತ್ತು ವೈದ್ಯಕೀಯವಾಗಿ ಸಶಕ್ತರಾಗಿರುವುದು ಕಡ್ಡಾಯ. ಅಭ್ಯರ್ಥಿಗಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಅಥವಾ ಪೊಲೀಸ್ ದಾಖಲೆಗಳಲ್ಲಿ ಕಪ್ಪು ಚುಕ್ಕೆ ಇರಬಾರದು.
ಅರ್ಜಿ ಸಲ್ಲಿಕೆ ಹೇಗೆ
ಆಸಕ್ತರು ಶಿವಮೊಗ್ಗದ ಜಿಲ್ಲಾ ಸಮಾದೇಷ್ಟರ ಕಾರ್ಯಾಲಯ ಅಥವಾ ಆಯಾ ತಾಲೂಕು ಘಟಕಗಳಲ್ಲಿ ಅರ್ಜಿಗಳನ್ನು ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 3 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾದೇಷ್ಟರಾದ ಡಾ. ಚೇತನ ಹೆಚ್.ಪಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. ( Deadline )
ಸಂಪರ್ಕಿಸಬೇಕಾದ ಪ್ರಮುಖ ಸಂಖ್ಯೆಗಳು: ಸಹಾಯಕ್ಕಾಗಿ ನಿಮ್ಮ ಹತ್ತಿರದ ಘಟಕಾಧಿಕಾರಿಗಳನ್ನು ಸಂಪರ್ಕಿಸಿ:
ಶಿವಮೊಗ್ಗ: 9964157471 | ಭದ್ರಾವತಿ: 9900283490
ಸಾಗರ: 8073831409 | ಶಿಕಾರಿಪುರ: 9901325146
ತೀರ್ಥಹಳ್ಳಿ: 7975957665 | ಸೊರಬ: 7976306266
ಹೊಸನಗರ: 9901002423 | ಜೋಗ: 9449699459
Shimoga Home Guards Recruitment 2026
Shimoga Home Guards Recruitment 2026


