ರೈಲ್ವೇ ಪ್ರಯಾಣಿಕರೇ ಗಮನಿಸಿ, ಈ ರೈಲು​ ಸಂಚಾರದಲ್ಲಿ ವಿಸ್ತರಣೆ 

ಸಾಗರ :  ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಫೆಬ್ರವರಿ 3ರಿಂದ 11ರವರೆಗೆ ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16581/82) ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. 

ಶಿವಮೊಗ್ಗ, ಭದ್ರಾವತಿಯಲ್ಲಿ ಶಾಲಾ ಮಕ್ಕಳು ಅಸ್ವಸ್ಥ! ಆಗಿದ್ದೇನು? ಸಿಇಒ ಹೇಮಂತ್ ಏನಂದ್ರು

ಸಾಗರ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಅಂದಾಜು 25 ರಿಂದ 30 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸುಗಮ ಪ್ರಯಾಣಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸಂಸದರು ಮನವಿ ಮಾಡಿದ್ದರು. ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜಾತ್ರೆಯ ಅವಧಿಯಲ್ಲಿ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಪ್ರಸ್ತುತ ವಾರಕ್ಕೆ ಮೂರು ದಿನ ಮಾತ್ರ ಸಂಚರಿಸುತ್ತಿದ್ದ ಈ ಎಕ್ಸ್‌ಪ್ರೆಸ್‌ ರೈಲನ್ನು ಫೆಬ್ರವರಿ 3ರಿಂದ 11ರವರೆಗೆ ಪ್ರತಿದಿನ ಓಡಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಈ ರೈಲು ಶಿವಮೊಗ್ಗಕ್ಕೆ ಸೀಮಿತವಾಗದೆ ಸಾಗರದ ಸಮೀಪದ ತಾಳಗುಪ್ಪ ನಿಲ್ದಾಣದವರೆಗೆ ಸಂಚರಿಸಲಿದ್ದು, ಭಕ್ತರು ನೇರವಾಗಿ ಜಾತ್ರಾ ನಗರಿಗೆ ತಲುಪಲು ದಾರಿಯಾಗಲಿದೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಅಧಿಕೃತ ವೇಳಾಪಟ್ಟಿ ಹೊರಬೀಳಲಿದೆ. 

Special Train to Sagara Marikamba Jathre from Feb 3

Special Train to Sagara Marikamba Jathre from Feb 3 Shivamogga Train Timings Change 2026 Dasara Special Trains
Special Train to Sagara Marikamba Jathre from Feb 3
shivamogga car decor sun control house
shivamogga car decor sun control house
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು