ಡೊಳ್ಳು ಬಾರಿಸಿದ್ದಕ್ಕೆ ಪೊಲೀಸರಿಗೆ ದೂರು/ ರಾಗಿಗುಡ್ಡದಲ್ಲಿ ಆಟವಾಡುವಾಗ ಕಿರಿಕ್/ ಅಳಿಯ ಮಗಳ ನಡುವಿನ ಜಗಳಕ್ಕೆ ಖಾಕಿ ಸಂಧಾನ/ ಇನ್ನಷ್ಟು ಸುದ್ದಿಗಳು TODAY@NEWS

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 7, 2023 SHIVAMOGGA NEWS  

ಜಮೀನು ವಿಚಾರಕ್ಕೆ ಗಲಾಟೆ 

ಶಿವಮೊಗ್ಗ ಜಿಲ್ಲೆ ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಳಸಿ ಗ್ರಾಮದಲ್ಲಿ ಭೂಮಿಯ ಗಡಿ ವಿಚಾರಕ್ಕೆ ಅಕ್ಕಪಕ್ಕದ ಜಮೀನಿನವರ ನಡುವೆ ಜಗಳವಾಗಿದೆ.ಮಾತಿನ ಭರದಲ್ಲಿ ಜಗಳವಾದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯುವರಿಗೆ ಎಚ್ಚರಿಕೆ ನೀಡಿದ್ದು, ಕಾನೂನಿನಡಿಯಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ. 

ಮಗಳು ಅಳಿಯನ ನಡುವೆ ಜಗಳ

ಇತ್ತ  ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಕುಟುಂಬವೊಂದರಲ್ಲಿ ಮಗಳು ಹಾಗೂ ಅಳಿಯನ ನಡುವೆ ಗಲಾಟೆಯಾದ ಬಗ್ಗೆ ಪೊಲೀಸರಿಗೆ ದೂರೊಂದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ಇಬ್ಬರಿಗೂ ಸಮಾಧಾನ ಹೇಳಿದ್ದಾರೆ. ಅಲ್ಲದೆ ಜಗಳ ಮಾಡಿಕೊಳ್ಳದಂತೆ ತಿಳಿ ಹೇಳಿದ್ದು, ಇನ್ನೊಮ್ಮೆ ಹೀಗಾಗದಂತೆ ಎಚ್ಚರವಹಿಸಿ ಎಂದು ತಿಳಿ ಹೇಳಿದ್ದಾರೆ. 

ಆಟ ವಾಡುವ ವಿಚಾರಕ್ಕೆ ರಾಗಿಗುಡ್ಡದಲ್ಲಿ ಗಲಾಟೆ

ಕಳೇದ ಮೂರನೇ ತಾರೀಖು ಶಿವಮೊಗ್ಗದ ರಾಗಿಗುಡ್ಡದಲ್ಲಿ ಹುಡುಗರು ಆಟವಾಡುತ್ತಿರುವಾಗ, ಗಲಾಟೆ ಮಾಡಿಕೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹುಡುಗರ ಗಲಾಟೆಯನ್ನು ನಿಲ್ಲಿಸಿದ್ದಾರೆ. ಬಳಿಕ ಎಲ್ಲರಿಗು ತಿಳುವಳಿಕೆ ಹೇಳಿ ಅಲ್ಲಿಂದ ಕಳುಹಿಸಿದ್ದಾರೆ.  

ಡೊಳ್ಳು ಭಾರಿಸುವ ವಿಚಾರಕ್ಕೆ ಕಂಪ್ಲೆಂಟ್

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್​ ನಲ್ಲಿ ಯುವಕರು ಡೊಳ್ಳು ಭಾರಿಸುವ ಅಭ್ಯಾಸ ಮಾಡುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿ ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದಾರೆ. ಸ್ಥಳೀಯರು ನೀಡಿದ ದೂರಿನನ್ವಯ ಸ್ಥಳಕ್ಕೆ ಬಂದ ಪೊಲೀಸರು, ಸಾರ್ವಜನಿಕ ಸ್ಥಳದಲ್ಲಿ ಡೊಳ್ಳು ಅಭ್ಯಾಸ ಮಾಡದಂತೆ ಸೂಚಿಸಿದ್ದಾರೆ.  


   

ಇನ್ನಷ್ಟು ಸುದ್ದಿಗಳು 


 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor