ಅಪ್ರಾಪ್ತೆ ಬಳಿ ಕುಡಿಯೋಕೆ ನೀರು ಕೇಳಿ ತಪ್ಪು ಮಾಡಿದ ಯುವಕ! ದಾಖಲಾಯ್ತು ಕೇಸ್! ಗಾಂಧಿ ಬಜಾರ್​ನಲ್ಲಿ ಸ್ನೇಹಿತೆಯನ್ನ ಕರೆದುಕೊಂಡು ಹೋಗುವಾಗ ಹಲ್ಲೆ!

This Article Written by / Malenadu Today / ಸೆಪ್ಟೆಂಬರ್ 7, 2023

ಅಪ್ರಾಪ್ತೆ ಬಳಿ ಕುಡಿಯೋಕೆ ನೀರು ಕೇಳಿ ತಪ್ಪು ಮಾಡಿದ ಯುವಕ! ದಾಖಲಾಯ್ತು ಕೇಸ್! ಗಾಂಧಿ ಬಜಾರ್​ನಲ್ಲಿ ಸ್ನೇಹಿತೆಯನ್ನ ಕರೆದುಕೊಂಡು ಹೋಗುವಾಗ ಹಲ್ಲೆ!

KARNATAKA NEWS/ ONLINE / Malenadu today/ Sep 7, 2023 SHIVAMOGGA NEWS  

ಆಪ್ರಾಪ್ತೆಗೆ ಕಿರುಕುಳ! ಕೇಸ್ ದಾಖಲು 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪೊಲೀಸ್ ಸ್ಟೇಷನ್ ಒಂದರಲ್ಲಿ ಯುವಕನೊಬ್ಬನ ವಿರುದ್ಧ  ಪೋಕ್ಸೋ ಕಾಯ್ದೆ (Pocso Act) ಅಡಿ ಕೇಸ್​ ದಾಖಲಾಗಿದೆ. 

 

ಕುಡಿಯಲು ನೀರು ಕೇಳಿ ಬಾಲಕಿಯ ಮನೆಯೊಳಗೆ ನುಗ್ಗಿದ್ದ ಆರೋಪಿ, ಆಕೆಯ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಜೋರಾಗಿ ಕಿರುಚಿದ್ದಾಳೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೂ ಘಟನೆ ಬೆನ್ನಲ್ಲೆ ಆರೋಪಿಯನ್ನು ಬಂಧಿಸುವಂತೆ ಪೋಷಕರು ಹಾಗೂ ಗ್ರಾಮಸ್ಥರು ಡಿವೈಎಸ್​ಪಿ ಗೋಪಾಲಕೃಷ್ಣ ನಾಯ್ಕ್​ರವರ ಬಳಿ ಒತ್ತಾಯಿಸಿದ್ದಾರೆ. ಸದ್ಯ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ.  


ಗಾಂಧಿಬಜಾರ್​ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ 

ಹುಷಾರಿಲ್ಲದ ಸ್ನೇಹಿತೆಯನ್ನ ಆಸ್ಪತ್ರೆಗೆ ತೋರಿಸಿ ಬೈಕ್​ನಲ್ಲಿ ಮನೆಗೆ ಬಿಡಲು ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಗಾಂಧಿಬಜಾರ್​ನಲ್ಲಿ ಹಲ್ಲೆ ಮಾಡಲಾಗಿದೆ. ಯುವಕನೊಬ್ಬ ಬೈಕ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ಸಹ ದಾಖಲಾಗಿದೆ. 


   

ಇನ್ನಷ್ಟು ಸುದ್ದಿಗಳು 


 

 

#ShimogaNews,#ShivamoggaNews,HosanagarA Today News,Male Nadu Today News. Com,Malnad Live,Malnad News Today,Malnad Report,Malnad Stories,News Sagar,Sagar Today News,Shikaripura Today News,Shimoga District Report,Shimoga Local News,Shimoga Times Today,Shimoga Today Details,shimoga today news,Shimoga Today Report,SHIVAMOGGA,shivamogga live,Shivamogga Today Live News,Shivamogga Today Video,Soraba Today News,Thirthahalli Today News

ಮುಂದಿನ ಸುದ್ದಿ ಒದಿ

Leave a Comment