Mp by raghavendra : ಜನರಲ್ಲಿ ಕ್ರೀಡಾ ಉತ್ತೇಜನವನ್ನು ಹೆಚ್ಚಿಸುವ ಸಲುವಾಗಿ ದೇಶದ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸಂಸತ್ ಖೇಲ್ ಮಹೋತ್ಸವ್ 2025 ಎಂಬ ಕಾರ್ಯಕ್ರಮವನ್ನು ಸೆಪ್ಟೆಂಬರ್ 21 ರಿಂದ ಡಿಸೆಂಬರ್ 25 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ವಬಿ. ವೈ ರಾಘವೇಂದ್ರ ಹೇಳಿದರು.
ಇಂದು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕೋರೋನದ ಸಮಯದಲ್ಲಿ ದೇಶ ಆರ್ಥಿಕ ಸಂಕಷ್ಟದಲ್ಲಿದ್ದರು ಸಹ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಅದೇ ರೀತಿ ಖೇಲೋ ಇಂಡಿಯಾದ ಮೂಲಕ ಶಾಲಾ ಮಟ್ಟದಿಂದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಆರ್ಥಿಕ ಸಹಾಯ ಮಾಡಲಾಗುತ್ತಿದೆ.ಇದೀಗ ಎಲ್ಲಾ ಲೋಕಸಭೆಗೆ ಕ್ರೀಡೆಯನ್ನು ಉತ್ತೇಜಿಸಲು ಹೊಸದೊಂದು ಟಾಸ್ಕ್ನ್ನು ಕೊಟ್ಟಿದ್ದಾರೆ, ಅದೇ ಲ ಸಂಸತ್ ಖೇಲ್ ಮಹೋತ್ಸವ್ 2025 ಎಂಬ ಕಾರ್ಯಕ್ರಮ
2030 ಕಾಮನ್ ವೆಲ್ತ್ ಸ್ಪೋರ್ಟ್ ಹಾಗೂ 2036 ರ ಒಲಂಪಿಕ್ಸ್ ಗೇಮ್ ಗಳಲ್ಲಿ ದೇಶ ಭಾಗಿಯಾಗಿ ಪದಕ ಗೆಲ್ಲುವಂತೆ ಮಾಡಲು ಸಂಸತ್ ಖೇಲ್ ಮಹೋತ್ಸವ್-2025 ಹೊಸ ಯೋಜನೆ ತರಲಾಗುತ್ತಿದೆ. ಈ ಕ್ರೀಡೆಗಳನ್ನು ಗ್ರಾಮೀಣ ಮಟ್ಟ ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟವೆಂಬ 03 ಭಾಗಗಳಲ್ಲಿ ನಡೆಸಲಾಗುತ್ತದೆ. ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಜಿಲ್ಲಾ ಮಟ್ಟಗಳಲ್ಲಿ ಪುರ ಸಭೆ ಹಾಗೂ ವಾರ್ಡ್ಗಳಲ್ಲಿ ಕ್ರೀಡೆಯನ್ನು ನಡೆಸಲಾಗುವುದು ಎಂದರು.
Mp by raghavendra ನೊಂದಣಿ ಪ್ರಕ್ರಿಯೆ ಯಾವಾಗ, ಯಾರೆಲ್ಲಾ ಭಾಗವಹಿಸಬಹುದು
ಈ ಕ್ರೀಡೆಗೆ ನೊಂಡಣಿ ಮಾಡಿಕೊಳ್ಳುವ ಸಲುವಾಗಿ ಪೋರ್ಟಲ್ನ್ನು ನಾಳೆ ನೆಹರು ಸ್ಟೇಡಿಯಂನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಈ ಕಾರ್ಯಕ್ರಮದ ನೊಂದಣಿ ಆಗಸ್ಟ್ 29 ರಿಂದ ಸೆಪ್ಟಂಬರ್ 20 ರ ವರೆಗೆ ಇರಲಿದ್ದು 18 ವರ್ಷ ಮೇಲ್ಪಟ್ಟ ಆಸಕ್ತರು ತಮ್ಮ ಹೆಸರನ್ನು ಪೋರ್ಟಲ್ ಮೂಲಕ ನೊಂದಾಯಿಸಿಕೊಳ್ಳಬಹುದು. ಆಫ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಲು ತಹಶೀಲ್ದಾರ್ ಕಚೇರಿಯಲ್ಲಿರುವ ಸಂಸದರ ಕಚೇರಿ ಸಂಪರ್ಕಿಸಬಹುದು ಎಂದರು.

