ಕುಂದಾಪುರದಿಂದ ಶಿವಮೊಗ್ಗ, ಶಿವಮೊಗ್ಗದಿಂದ ದಾವಣಗೆರೆಗೆ ವರ್ಗಾವಣೆಗೆ ಮೆಗಾಪ್ಲಾನ್! ಸಸ್ಪೆಂಡ್ ಆದ KSRTC ನೌಕರ

ajjimane ganesh

KSRTC Employee Suspended ನಕಲಿ ದಾಖಲೆ ಸೃಷ್ಟಿ: ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಮಾನತು

KSRTC Employee Suspended ಬೆಂಗಳೂರು: ಕೆಎಸ್‌ಆರ್‌ಟಿಸಿಯಲ್ಲಿ (KSRTC) ನಕಲಿ ದಾಖಲೆಗಳನ್ನು (Fake Documents) ಸೃಷ್ಟಿಸಿ ಸಿಬ್ಬಂದಿ ವರ್ಗಾವಣೆ ಹಾಗೂ ವಜಾಗೊಂಡ ನೌಕರರ ಪುನರ್ ನೇಮಕಾತಿಗೆ ಪ್ರಯತ್ನಿಸಿದ್ದ ಡೇಟಾ ಎಂಟ್ರಿ ಆಪರೇಟರ್​ ಒಬ್ಬರ ವಿರುದ್ಧ ಕೆಎಸ್​ಆರ್​ಟಿಸಿ ಸಂಸ್ಥೆ ಕ್ರಮ ಕೈಗೊಂಡಿದ್ದು, ಅವರನ್ನು ಅಮಾನತು ಮಾಡಿದೆ.  ಲೆಕ್ಕಪತ್ರ ವಿಭಾಗದ ಕಿರಿಯ ಸಹಾಯಕ ಮತ್ತು ಡಾಟಾ ಎಂಟ್ರಿ ಆಪರೇಟರ್‌ ರಿಚರ್ಡ್‌ ಜೆ. ಅಮಾನತುಗೊಂಡವರು. 

KSRTC Employee Suspended
news today

ಇವರು ಶಿವಮೊಗ್ಗ ಘಟಕದ ಸಿಬ್ಬಂದಿಯೊಬ್ಬರಿಗೆ ಅವರನ್ನು ದಾವಣಗೆರೆ ವಿಭಾಗಕ್ಕೆ ವರ್ಗಾಯಿಸುವುದಾಗಿ  ₹60,000 ಪಡೆದುಕೊಂಡಿದ್ದರು. ಇನ್ನೊಂದೆಡೆ ಕುಂದಾಪುರ ಘಟಕದ ಸಿಬ್ಬಂದಿಯೊಬ್ಬರನ್ನು ಶಿವಮೊಗ್ಗ ವಿಭಾಗಕ್ಕೆ ವರ್ಗಾಯಿಸಲು ₹1.35 ಲಕ್ಷ ಪಡೆದಿದ್ದರು.

ಅಲ್ಲದೆ ವಜಾಗೊಂಡಿದ್ದ ಸಿಬ್ಬಂದಿ ಮತ್ತೊಮ್ಮೆ ನೇಮಕಾತಿ ಮಾಡುವುದಾಗಿ ಹಣ ಪಡೆದಿದ್ದ. ಮೂವರಿಗೂ ನಕಲಿ ಆದೇಶಗಳನ್ನು (Fake Orders) ಸೃಷ್ಟಿಸಿ, ಅವಶ್ಯಕತೆ ಇರುವ ಅಧಿಕಾರಿಗಳ ಸಹಿಯನ್ನು ಸ್ಕ್ಯಾನ್‌ ಮಾಡಿ  ಆದೇಶ ಕಾಪಿ ಮೇಲೆ ಪ್ರಿಂಟ್ ಮಾಡಿ ನೀಡಿದ್ದಾರ. ಈ ಬಗ್ಗೆ ಅನುಮಾನಗೊಂಡ ಅಧಿಕಾರಿಗಳು ಸದ್ಯ ಈ ಕ್ರಮ ಕೈಗೊಂಡಿದ್ದಾರೆ.  

malnad news epaper today july 18Get the latest Shivamogga news 
Get the latest Shivamogga news

KSRTC Employee Suspended

ಕೆಎಸ್‌ಆರ್‌ಟಿಸಿ, ನಕಲಿ ದಾಖಲೆ, ಅಮಾನತು, KSRTC, Fake Documents, Suspension, Transfer, Bengaluru, #KSRTC #FakeDocuments #Suspension  

Share This Article