Water to VV Sagar from July 27 Bhadra Upper Canal Project ಭದ್ರಾ ಮೇಲ್ದಂಡೆ ಯೋಜನೆ: ವಾಣಿ ವಿಲಾಸ ಸಾಗರಕ್ಕೆ ಜುಲೈ 27ರಿಂದ ನೀರು ಹರಿವು
ಶಿವಮೊಗ್ಗ: ಭದ್ರಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ವಾಣಿ ವಿಲಾಸ ಸಾಗರಕ್ಕೆ (VV Sagara) ಜುಲೈ 27ರಿಂದ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯದಿಂದ ಮುಖ್ಯ ಕಾಲುವೆಯ ಮೂಲಕ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು 4.25 ಟಿಎಂಸಿ ಅಡಿ ನೀರನ್ನು (TMC feet of water) ಹರಿಸಲು ತೀರ್ಮಾನಿಸಲಾಗಿದೆ.



ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಿಂದ ವೇದಾವತಿ ನದಿಗೆ ಸೇರುವ ಹಳ್ಳದ ಮುಖಾಂತರ ವಾಣಿ ವಿಲಾಸ ಸಾಗರಕ್ಕೆ ತಲುಪಲಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕೆರೆ ಕಸಬಾ, ಅಮೃತಾಪುರ, ಅಜ್ಜಂಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರು ಹಾದು ಹೋಗಲಿದೆ.
ಶಾಂತಿಪುರ ಪಂಪ್ ಹೌಸ್-1, ಜಂಭದಹಳ್ಳ ಅಕ್ವಡಕ್ಟ್, ತರೀಕೆರೆ ರೈಲು ಸೇತುವೆ, ಬೆಟ್ಟತಾವರೆಕೆರೆ ಪಂಪ್ ಹೌಸ್-2, ಅಜ್ಜಂಪುರ ಸುರಂಗದ ಮಾರ್ಗವಾಗಿ ಹರಿದು ನೀರು ವೇದಾವತಿ ನದಿಯನ್ನು ಸೇರುವ ಹಳ್ಳದ ಮೂಲಕ ವಾಣಿ ವಿಲಾಸ ಸಾಗರ ಜಲಾಶಯವನ್ನು ತಲುಪಲಿದೆ.
Water to VV Sagar from July 27 Bhadra Upper Canal Project
ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವ ಹಿನ್ನೆಲೆಯಲ್ಲಿ, ವಿಶ್ವೇಶ್ವರಯ್ಯ ಜಲನಿಗಮವು ಸುರಕ್ಷತಾ ಕ್ರಮವಾಗಿ, ನೀರು ಹರಿಯುವ ಕಾಲುವೆ ಮತ್ತು ಹಳ್ಳದ ಪಾತ್ರಗಳಲ್ಲಿ ಓಡಾಡುವುದನ್ನು ನಿಷೇಧಿಸಿದೆ.
ಈ ಸೂಚನೆಗಳನ್ನು ಉಲ್ಲಂಘಿಸುವುದು, ನೀರಾವರಿ ಕಾಲುವೆಗಳನ್ನು ಹಾನಿ ಮಾಡುವುದು, ಅನಧಿಕೃತವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿ ನೀರನ್ನು ಎತ್ತುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ನೀರಾವರಿ ಕಾಯ್ದೆಯಡಿ ಕಾನೂನು ಕ್ರಮ (legal action) ತೆಗೆದುಕೊಳ್ಳಲಾಗುವುದು ಎಂದು ನಿಗಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Water to VV Sagar from July 27 Bhadra Upper Canal Project
Water from the Bhadra Upper Canal Project will be released to Vani Vilas Sagar in Chitradurga from July 27.
ಭದ್ರಾ ಮೇಲ್ದಂಡೆ ಯೋಜನೆ, ವಾಣಿ ವಿಲಾಸ ಸಾಗರ, ಜುಲೈ 27, ನೀರು ಹರಿವು, ವಿಶ್ವೇಶ್ವರಯ್ಯ ಜಲನಿಗಮ, ಭದ್ರಾ ಜಲಾಶಯ, ಚಿತ್ರದುರ್ಗ, ಹಿರಿಯೂರು, Bhadra Upper Canal Project, Vani Vilas Sagar, water release, July 27, Visvesvaraya Jala Nigama, Bhadra Dam, Chitradurga, Hiriyur , #BhadraProject #VVSagara #WaterProject #KarnatakaWater #Shivamogga #Chitradurga #Irrigation