Nanjappa Life Care Hospital ಶಿವಮೊಗ್ಗ: ತೀವ್ರ ತಲೆನೋವಿನಿಂದ ಬಳಲುತ್ತಿದ್ದ 21 ವರ್ಷದ ಯುವತಿಯೊರಿಗೆ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯು ‘ಫ್ಲೋ ಡೈವರ್ಟರ್’ ಎಂಬ ಅತ್ಯಾಧುನಿಕ ವಿಧಾನವನ್ನು ಬಳಸಿ, ಆಕೆಯ ಪ್ರಮುಖ ಮೆದುಳಿನ ರಕ್ತನಾಳವನ್ನು ಯಶಸ್ವಿಯಾಗಿ ಪುನರ್ ನಿರ್ಮಿಸುವ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದೆ ಎಂದು ಆಸ್ಪತ್ರೆಯ ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ಡಾ. ನಿಶಿತಾ ಹೇಳಿದರು.
ಇಂದು ನಡೆದು ಪತ್ರಿಕಾ ಘೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಯುವತಿಗೆ ಎಂಆರ್‌ಐ ಸ್ಕ್ಯಾನ್ ಮಾಡಿದಾಗ ಆಕೆಯ ಮೆದುಳಿನ ಎಡಭಾಗದಲ್ಲಿರುವ ಪ್ರಮುಖ ರಕ್ತನಾಳದಲ್ಲಿ 9 ಮಿಲಿಮೀಟರ್ ಗಾತ್ರದ “ಡಿಸ್ಸೆಕ್ಟಿಂಗ್ ಅನೂರಿಸಂ” (ರಕ್ತನಾಳದಲ್ಲಿ ಬಲೂನ್‌ನಂತಹ ಊತ) ಪತ್ತೆಯಾಗಿದೆ. ಈ ಊತವು ಯಾವುದೇ ಕ್ಷಣದಲ್ಲಿ ಒಡೆದು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಸಾವು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಅಪಾಯವಿತ್ತು ಎಂದು ಆ ಸಮಸ್ಯೆಯ ಗಂಭೀರತೆ ಬಗ್ಗೆ ಮಾಹಿತಿ ನೀಡಿದರು,
ರಕ್ತನಾಳದ ಊತದ ಆಕಾರ ಮತ್ತು ಸ್ಥಳವು ತೆರೆದ ಮೆದುಳಿನ ಶಸ್ತ್ರಚಿಕಿತ್ಸೆಗೆ ಸೂಕ್ತವಾಗಿರಲಿಲ್ಲ. ಹೀಗಾಗಿ, ನಂಜಪ್ಪ ಲೈಫ್ ಕೇರ್ ವೈದ್ಯಕೀಯ ತಂಡವು “ಫ್ಲೋ ಡೈವರ್ಟರ್ ಬಳಸಿ ಪ್ರಮುಖ ರಕ್ತನಾಳ ಪುನರ್ ನಿರ್ಮಾಣ” ಎಂಬ ವಿಶೇಷ ಮತ್ತು ಸುಧಾರಿತ ವಿಧಾನವನ್ನು ಆಯ್ದುಕೊಂಡಿತು. ಇಂತಹ ಅತ್ಯಾಧುನಿಕ ಕಾರ್ಯವಿಧಾನಗಳನ್ನು ಉನ್ನತ ತಂತ್ರಜ್ಞಾನ ಮತ್ತು ಅನುಭವಿ ನ್ಯೂರೋ ಇಂಟರ್ವೆನ್ಷನಲಿಸ್ಟ್‌ಗಳನ್ನು ಹೊಂದಿರುವ ಆಸ್ಪತ್ರೆಗಳಲ್ಲಿ ಮಾತ್ರ ನಡೆಸಲು ಸಾಧ್ಯ ಎಂದು ಡಾ. ನಿಶಿತಾ ವಿವರಿಸಿದರು.


Nanjappa Life Care Hospital ಫ್ಲೋ ಡೈವರ್ಟರ್ ಕಾರ್ಯವೈಖರಿ ಹೇಗೆ
Nanjappa Life Care Hospital ಫ್ಲೋ ಡೈವರ್ಟರ್’ ಎಂದರೆ ಒಂದು ಸಣ್ಣ, ಮೃದುವಾದ ಜಾಲರಿ ಕೊಳವೆ. ಇದನ್ನು ಊತವಿರುವ ರಕ್ತನಾಳದ ಪಕ್ಕದಲ್ಲಿರುವ ಮುಖ್ಯ ರಕ್ತನಾಳದೊಳಗೆ ಅಳವಡಿಸಲಾಗುತ್ತದೆ. ಇದು ಊತದ ಕಡೆಗೆ ರಕ್ತ ಹರಿಯುವುದನ್ನು ತಡೆಯುತ್ತದೆ ಮತ್ತು ರಕ್ತವು ಬೇರೆ ಸುರಕ್ಷಿತ ಮಾರ್ಗಗಳ ಮೂಲಕ ಸಂಚರಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಊತವಿರುವ ರಕ್ತನಾಳದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಕಾಲಾನಂತರದಲ್ಲಿ, ರಕ್ತ ಸಂಚಾರ ಕಡಿಮೆಯಾಗುವುದರಿಂದ ಊತವು ಕ್ರಮೇಣವಾಗಿ ಕುಗ್ಗುತ್ತದೆ ಮತ್ತು ಮೆದುಳಿನಲ್ಲಿ ರಕ್ತಸ್ರಾವವನ್ನು ತಡೆಯುತ್ತದೆ ಎಂದರು.
ಈ ವಿಧಾನವನ್ನು ಬಳಸಿ, ವೈದ್ಯಕೀಯ ತಂಡವು ಅರಿವಳಿಕೆ ನೀಡಿ, ರೋಗಿಯ ತೊಡೆಯಲ್ಲಿ ಸಣ್ಣ ಸೂಜಿ ಗಾತ್ರದ ರಂಧ್ರದ ಮೂಲಕ ತೆಳುವಾದ ಟ್ಯೂಬ್ ಅನ್ನು ಮೆದುಳಿನ ರಕ್ತನಾಳದವರೆಗೆ ತಲುಪಿಸಿ, ‘ಫ್ಲೋ ಡೈವರ್ಟರ್’ ಜಾಲರಿಯನ್ನು ಯಶಸ್ವಿಯಾಗಿ ಅಳವಡಿಸಿತು. ಇದರಿಂದಾಗಿ ಊತವಿರುವ ರಕ್ತನಾಳಕ್ಕೆ ರಕ್ತ ಸಂಚಾರ ನಿಂತು, ಅದು ನೈಸರ್ಗಿಕವಾಗಿ ಗುಣವಾಗಲು ಸಹಾಯವಾಯಿತು.
ಶಸ್ತ್ರಚಿಕಿತ್ಸೆಯ ನಂತರ, ಯುವತಿ ಸಂಪೂರ್ಣವಾಗಿ ಚೇತರಿಸಿಕೊಂಡು ಯಾವುದೇ ತೊಂದರೆಗಳಿಲ್ಲದೆ ಮರುದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ವೈದ್ಯರು ತಿಳಿಸಿದರು.
